ತೋಟದಿಂದ ಅಡಿಕೆ ಕಳ್ಳತನ – ತುಂಬೆಹಿತ್ಲು ರಕ್ತೇಶ್ವರಿ ದೈವದ ಮೊರೆ ಹೋದ ಮಾಲೀಕ

ವಾರ್ಷಿಕ ನೇಮೋತ್ಸವ ಸಂದರ್ಭ ದೈವದ ಎದುರಲ್ಲೇ ತಪ್ಪೊಪ್ಪಿಕೊಂಡ ಕಳ್ಳರು

ಕಾರ್ಕಳ : ತೋಟದಿಂದ ಅಡಿಕೆ ಕಳ್ಳತನಗೈದ ಕಳ್ಳರು ವರ್ಷದೊಳಗಡೆ ದೈವದ ನೇಮೋತ್ಸವ ಸಂದರ್ಭ ತಪ್ಪೊಪ್ಪಿಕೊಂಡ ಘಟನೆ ಹಿರ್ಗಾನ ಗ್ರಾಮದ ತುಂಬೆಹಿತ್ಲುವಿನಲ್ಲಿ ನಡೆದಿದೆ. ಹಿರ್ಗಾನ ಗ್ರಾಮದ ತುಂಬೆಹಿತ್ಲು ಸತೀಶ್‌ ಚೌಟ ಎಂಬವರಿಗೆ ಸೇರಿದ ತೋಟದಿಂದ ವರ್ಷದ ಹಿಂದೆ ಅಡಿಕೆ ಕಳ್ಳತನವಾಗಿತ್ತು. ಅಡಿಕೆ ಕಳ್ಳತನವಾಗಿರುವ ಕುರಿತು ಸತೀಶ್‌ ಅವರು ತುಂಬೆಹಿತ್ಲು ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ ನೇಮೋತ್ಸವ ಸಂದರ್ಭದಲ್ಲಿ ಕಳ್ಳರ ಪತ್ತೆಗಾಗಿ ನಿವೇದಿಸಿಕೊಂಡಿದ್ದರು.
ಮಾ. 14ರಂದು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ ನೇಮೋತ್ಸವ ನಡೆಯುತ್ತಿದ್ದ ವೇಳೆ ಅಡಿಕೆ ಕಳ್ಳತನಗೈದ ಇಬ್ಬರು ತಾವು ಅಡಿಕೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವುದು ದೈವಸ್ಥಾನದ ಕಾರಣಿಕತೆಗೆ ಸಾಕ್ಷಿಯಾಗಿದೆ.









error: Content is protected !!
Scroll to Top