ಜೆಕೆಎಕೆ ವೆಂಚರ್ಸ್‌ ಒಡೆತನಕ್ಕೆ ಹೊಟೇಲ್‌ ಬಾಲಾಜಿ ಇನ್‌

ಕಾರ್ಕಳ : ಜೆಕೆಎಕೆ ವೆಂಚರ್ಸ್‌ನ ಮಾಲಕತ್ವದೊಂದಿಗೆ ಕಾರ್ಯಾಚರಿಸುತ್ತಿರುವ ಹೊಟೇಲ್‌ ಬಾಲಾಜಿ ಇನ್‌ನಲ್ಲಿ ಮಾ. 20ರಂದು ಅದ್ಧೂರಿಯಾಗಿ ಮ್ಯೂಸಿಕಲ್‌ ನೈಟ್‌ ಜರುಗಲಿದೆ. ಅಂದು ಸಂಜೆ 6.30ಕ್ಕೆ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಚಾಲನೆ ನೀಡಲಿರುವರು. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ತಹಶೀಲ್ದಾರ್‌ ಪ್ರದೀಪ್‌ ಆರ್.‌, ನ್ಯಾಯವಾದಿ ಮಣಿರಾಜ್‌ ಶೆಟ್ಟಿ ಹಾಗೂ ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಉಪಸ್ಥಿತರಿರುವರು.

ಮ್ಯೂಸಿಕಲ್‌ ನೈಟ್‌
ರಾತ್ರಿ 7 ಗಂಟೆಗೆ ಮ್ಯೂಸಿಕಲ್‌ ನೈಟ್‌ ನಡೆಯಲಿದ್ದು, ಖ್ಯಾತ ಗಾಯಕಿ, ಸರಿಗಮಪ ಸೀಸನ್‌ 8ರ ವಿನ್ನರ್‌ ಅಖಿಲಾ ಪಜಿಮಣ್ಣು, ಪ್ರಕಾಶ್‌ ಮಹದೇವನ್‌, ರೂಪ ಪ್ರಕಾಶ್‌ ಸಂಗೀತ ರಸದೌತಣ ಉಣಬಡಿಸಲಿದ್ದಾರೆ. ಕೀಬೋರ್ಡ್‌ನಲ್ಲಿ ರಾಜೇಶ್‌ ಕಾರ್ಕಳ, ಸ್ಯಾಕ್ಸೋಫೋನ್‌ನಲ್ಲಿ ಮಹೇಶ್‌ ಮೊಯ್ಲಿ, ತಬಲಾದಲ್ಲಿ ದೀಪಕ್‌ ರಾಜ್‌ ಉಳ್ಳಾಲ್‌, ರಿದಮ್‌ನಲ್ಲಿ ರಾಜೇಂದ್ರ ಕಾರ್ಕಳ, ಗಿಟಾರ್‌ನಲ್ಲಿ ರೋಶನ್, ಬೇಸ್‌ ಗಿಟಾರ್‌ನಲ್ಲಿ ಆಶ್ಲೆ ಸಹಕರಿಸಲಿದ್ದು, ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಜೆಕೆಎಕೆ ವೆಂಚರ್ಸ್ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಬಾಲಾಜಿ ಇನ್‌ನಲ್ಲಿ ಎಸಿ ರೆಸ್ಟೋರೆಂಟ್‌, ಬ್ಯಾಂಕ್ವೆಟ್‌ ಹಾಲ್‌, ಪಾರ್ಟಿ ಹಾಲ್‌, ಬಾರ್ ಆಂಡ್‌ ರೆಸ್ಟೋರೆಂಟ್‌, ಅತ್ಯಾಧುನಿಕ ಶೈಲಿಯ, ಸುಸಜ್ಜಿತ ಲಾಡ್ಜಿಂಗ್‌, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆಯಿದೆ. ಗ್ರಾಹಕರಿಗೆ ಆಹ್ಲಾದಕರ ವಾತಾವರಣದಲ್ಲಿ ಶುಚಿರುಚಿಯಾದ ವೆಜ್‌ ಹಾಗೂ ನಾನ್‌ ವೆಜ್‌ ಐಟಂ ಲಭ್ಯವಿದೆ. 5 ಕಿ.ಮೀ. ವ್ಯಾಪ್ತಿಯೊಳಗೆ ಉಚಿತ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಲಾಡ್ಜ್‌ : 9663729867, ರೆಸ್ಟೋರೆಂಟ್‌ : 9353665076















































error: Content is protected !!
Scroll to Top