ಬಜೆಟ್‌ನಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ – ಬಿಪಿನ್‌ಚಂದ್ರಪಾಲ್‌ ನಕ್ರೆ

ಕಾರ್ಕಳ : ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2026-27ರ ಬಜೆಟ್ ರಾಜ್ಯದ ಆರ್ಥಿಕ ಮತ್ತು ಅಭಿವೃದ್ದಿ ಸಾಧನೆಯ ಗುರಿಯೊಂದಿಗಿನ ಶೈಕ್ಷಣಿಕ ಸಾಮಾಜಿಕ ಅಭ್ಯುದಯದ ಸಮತೋಲನದ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ ಚಂದ್ರಪಾಲ್‌ ನಕ್ರೆ ಹೇಳಿದ್ದಾರೆ.

ನಿರುದ್ಯೋಗ ನಿವಾರಣೆಯ ಗುರಿಯೊಂದಿಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ, ಮಹಿಳಾ ಅಭ್ಯುದಯ ಗುರಿಸಾಧನೆಗೆ ವಿವಿಧ ಯೋಜನೆಗಳಡಿ 94,663 ಕೋಟಿ ರೂ. ಮಕ್ಕಳ ಮೂಲಭೂತ ಅಭಿವೃದ್ದಿ ಸಾಧನೆಗಾಗಿ ವಿವಿಧ ಯೋಜನೆಗಳಡಿ 63,135 ಕೋಟಿ ರೂ. ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಪರಿವರ್ತಿಸಲು 4.48ಕೋಟಿ ರೂ. ಮೀಸಲು, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಯೇ ಮೊದಲಾದ ಶೈಕ್ಷಣಿಕ ಅಭಿವೃದ್ದಿಯ ವಿದ್ಯಾರ್ಥಿಪರ ಯೋಜನೆಗಳು ವರ್ತಮಾನದ ಶೈಕ್ಷಣಿಕ ಆದ್ಯತೆಯಾಗಿದ್ದು ಸ್ವಾಗತಾರ್ಹ ಆಗಿದೆ ಎಂದು ಬಿಪಿನ್‌ ಚಂದ್ರಪಾಲ್‌ ತಿಳಿಸಿದ್ದಾರೆ.

ಕೃಷಿ ಹಾಗೂ ಕರಾವಳಿ ಮೀನುಗಾರಿಕಾ ಯೋಜನೆಯಡಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಜಾರಿ, ರೈತರ ಬೆಳೆ ವಿಮೆಗಾಗಿ 6213 ಕೋ.ರೂ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30,000 ಕೋಟಿ ಸಾಲ, ಮೀನುಗಾರಿಕಾ ಕಿಟ್ ಮೌಲ್ಯ 10 ಸಾವಿರ ರೂ. ದಿಂದ 20 ಸಾವಿರ ರೂ. ಗೆ ಹೆಚ್ಚಳ, ಮೀನುಗಾರಿಕಾ ರಸ್ತೆಗಳ ಅಭಿವೃದ್ದಿಗಾಗಿ 20 ಕೋಟಿ ರೂ. ಮೀಸಲಿಡಲಾಗಿದ್ದು ಒಟ್ಟಾರೆಯಾಗಿ ಇದೊಂದು ಸಮಗ್ರ ಅಭಿವೃದ್ಧಿಯ ಗುರಿಯೊಂದಿಗಿನ ಬಜೆಟ್ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.

















































error: Content is protected !!
Scroll to Top