ಶ್ರೀ ಶಿವಭಕ್ತ ಭಜನಾ ಮಂದಿರ ದಾನಶಾಲೆ

ಕಾರ್ಕಳ : ಶ್ರೀ ಶಿವಭಕ್ತ ಭಜನಾ ಮಂದಿರ ದಾನಶಾಲೆ ಇಲ್ಲಿ ಫೆ. 12ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ರಾಜೇಶ್‌ ಭಟ್‌ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಏಕಾಹ ಭಜನೆ
ಫೆ. 13ರಂದು ಬೆಳಿಗ್ಗೆ 6.51ಕ್ಕೆ ಆರಂಭಗೊಂಡು ಫೆ.14ರ ಬೆಳಿಗ್ಗೆ 6.51ರವರೆಗೆ 33ನೇ ವರ್ಷದ ಏಕಾಹ ಭಜನೆ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್‌, ಉದ್ಯಮಿಗಳಾದ ಬಿ. ಗಣಪತಿ ಹೆಗ್ಡೆ, ವಿಜಯ ಶೆಟ್ಟಿ ಹಾಗೂ ಯೋಗೀಶ್‌ ಕೋಟ್ಯಾನ್‌ ದೀಪ ಬೆಳಗಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































error: Content is protected !!
Scroll to Top