ಫೆ. 12-14 : ಫ್ರೆಂಡ್ಸ್‌ ಟ್ರೋಫಿ ಕಾರ್ಕಳ ಕ್ರಿಕೆಟ್‌ ಪಂದ್ಯಾಟ

ಕಾರ್ಕಳ : ಕಾರ್ಕಳ ಫ್ರೆಂಡ್ಸ್‌ ಇವರ ಆಶ್ರಯದಲ್ಲಿ 3ನೇ ವರ್ಷದ ಹೊನಲು ಬೆಳಕಿನ ಉಡುಪಿ – ದ.ಕ. ಜಿಲ್ಲಾ ಮಟ್ಟದ ಅಂಡರ್‌ ಆರ್ಮ್ ಕ್ರಿಕೆಟ್‌ ಪಂದ್ಯಾಟ ಫ್ರೆಂಡ್ಸ್‌ ಟ್ರೋಫಿ ಕಾರ್ಕಳ ಫೆ. 12-13 ಹಾಗು 14ರಂದು ಗಾಂಧಿಮೈದಾನದಲ್ಲಿ ನಡೆಯಲಿದೆ.

ಫೆ. 12ರಂದು ರಾತ್ರಿ 7 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕುಂದಾಪುರ ಸಿದ್ಧಿವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್‌ ಕೆದೂರು ಇದರ ಅರುಣ್‌ ಕುಮಾರ್‌ ಶೆಟ್ಟಿ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ. 13ರಂದು ಸಭಾ ಕಾರ್ಯಕ್ರಮ ನಡೆಯಲಿದ್ದು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಫೆ. 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕ ಉದಯ್ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೂರು ದಿನದ ಕಾರ್ಯಕ್ರಮದಲ್ಲೂ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

































































































error: Content is protected !!
Scroll to Top