ಕಾರ್ಕಳ : ದೂಪದಕಟ್ಟೆಯಲ್ಲಿ ಫೆ. 6ರಂದು ಕಾರುಗಳ ನಡುವೆ ಅಪಘಾತ ಸಂಭವಿಸಿದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿಯ ದಿನೇಶ್ ಗೌಡ ಎಂಬವರು ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಹೆಂಡತಿ ಲೀಲಾವತಿ, ಮಗಳು ವಿನುಶ್ರೀ, ಸಂಬಂಧಿ ದಯಾನಂದ ಮತ್ತು ಚಾಲಕನಾಗಿ ತನ್ನ ಅಳಿಯ ಅಖಿಲೇಶ್ ಎಂಬುವವರೊಂದಿಗೆ ನಿಟ್ಟೆಯಿಂದ ಬೆಳ್ತಂಗಡಿಗೆ ಹೋಗುತ್ತಿರುವಾಗ ನಿಟ್ಟೆ ಗ್ರಾಮದ ದೂಪದಕಟ್ಟೆ ಜಂಕ್ಷನ್ ಬಳಿ ತಲುಪುವಾಗ ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಜಂಕ್ಷನ್ ಕಡೆಗೆ ವಿಶ್ವಾಸ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ದೂಪದಕಟ್ಟೆ ಸರ್ಕಲನ್ನು ಬಳಸದೆ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದಿನೇಶ್ ಗೌಡ ಅವರ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ದಯಾನಂದ ಅವರು ಗಾಯಗೊಂಡಿದ್ದಾರೆ.
ಕಾರುಗಳ ನಡುವೆ ಡಿಕ್ಕಿ





