ರಿಕ್ಷಾ ಡಿಕ್ಕಿ – ಪಾದಚಾರಿ ಸಾವು

ಕಾರ್ಕಳ : ರಿಕ್ಷಾ ಡಿಕ್ಕಿಯಾಗಿ ಗಾಯಗೊಂಡಿದ್ದ ಪಾದಚಾರಿ ಸಾವನಪ್ಪಿದ ದುರ್ಘಟನೆ ಜ. 27ರಂದು ನಿಟ್ಟೆ ಗ್ರಾಮದ ದೂಪದಕಟ್ಟೆಯಲ್ಲಿ ಸಂಭವಿಸಿದೆ. ಸ್ಟ್ಯಾನಿ ರೋಡ್ರಿಗಸ್ ಮೃತದುರ್ದೈವಿ. ಜ. 26ರಂದು ಸಂಜೆ ದೂಪದಕಟ್ಟೆಯಲ್ಲಿ ಶಾರದ ಹೊಟೇಲ್‌ ಮುಂಭಾಗದಲ್ಲಿ ಹಾದು ಹೋಗಿರುವ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ದೂಪದಕಟ್ಟೆ ಕಡೆಯಿಂದ ನಿಟ್ಟೆ ಕಡೆಗೆ ಸಾಗುತ್ತಿದ್ದ ಎಲೆಕ್ಟ್ರಿಕ್ ಅಟೋ ರಿಕ್ಷಾ ರಸ್ತೆ ದಾಟುತ್ತಿದ್ದ ಸ್ಟ್ಯಾನಿ ರೋಡ್ರಿಗಸ್ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಟ್ಯಾನಿ ರೋಡ್ರಿಗಸ್ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ದಾಖಲಿಸಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಜ. 27ರ ಬೆಳಗ್ಗಿನ ಜಾವ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



















error: Content is protected !!
Scroll to Top