ಕಾರ್ಕಳ : ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿರುವ ಬಗ್ಗೆ ವರಂಗದಲ್ಲಿ ಜ. 19ರಂದು ಸಂಭವಿಸಿದೆ. ಮಾತಿಬೆಟ್ಟು ಕಲ್ಪ ವೃಕ್ಷದ ವಿದ್ಯಾನಂದ ಶೆಟ್ಟಿಯವರ ಮನೆಯ ಅಂಗಳಕ್ಕೆ ಪಕ್ಕದ ಮನೆಯ ಪ್ರಕಾಶ ತೆಲಿಗ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ತನಗೆ ವರಂಗ ಸಹಕಾರಿ ಬ್ಯಾಂಕಿನಲ್ಲಿ ಇರುವ ಸಾಲದ ಬಗ್ಗೆ ಅಲ್ಲಿ ಕೆಲಸ ಮಾಡುವ ನಿನ್ನ ಅಕ್ಕನಿಗೆ ಹೇಳಿಸಿ ನೋಟಿಸ್ ಜ್ಯಾರಿ ಮಾಡುತ್ತಿ ಎಂದು ವಿದ್ಯಾನಂದ ಶೆಟ್ಟಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ಹಲ್ಲೆ ಮಾಡಿರುತ್ತಾರೆ. ಅಲ್ಲದೆ ವಿದ್ಯಾನಂದ ಶೆಟ್ಟಿಯವರ ಅಂಗಿಯನ್ನು ಹಿಡಿದು ಪ್ರಕಾಶ್ ಎಳೆದಾಡಿದ್ದಾರೆ. ಈ ಬಗ್ಗೆ ವಿದ್ಯಾನಂದ ಶೆಟ್ಟಿಯರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ


























