ಬಸ್‌ನಿಂದ ಇಳಿಯುವ ಮೊದಲೇ ಬಸ್‌ ಚಲಾವಣೆ – ಪ್ರಯಾಣಿಕನಿಗೆ ಗಾಯ

ಕಾರ್ಕಳ : ಬಸ್‌ನಿಂದ ಇಳಿಯುವ ಮೊದಲೇ ಬಸ್‌ ಚಲಾಯಿಸಿದ ಪರಿಣಾಮ ಪ್ರಯಾಣಿಕ ಬಿದ್ದು ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಜ. 14ರಂದು ಮುರತ್ತಂಗಡಿಯಲ್ಲಿ ನಡೆದಿದೆ.
ನಿರಂಜನ ಆಳ್ವ ಎಂಬವರು ಮೂಡಬಿದಿರೆಯಿಂದ ಸಾಣೂರು ಗ್ರಾಮದ ಮುರತ್ತಂಗಡಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದು, ಮುರತ್ತಂಗಡಿ ಬಸ್‌ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿರುತ್ತಾರೆ. ಈ ವೇಳೆ ಅವರು ಬಸ್‌ ಇಳಿಯಲು ಹೋದಾಗ ಬಸ್‌ ಕಂಡಕ್ಟರ್‌ ಒಮ್ಮೆಲೆ ಬಸ್ಸನ್ನು ಚಲಾಯಿಸುವಂತೆ ಸೂಚನೆ ನೀಡಿದ್ದು, ಚಾಲಕ ನಿರ್ಲಕ್ಷತನದಿಂದ ಬಸ್‌ ಚಲಾಯಿಸಿದ ಪರಿಣಾಮ ನಿರಂಜನ ಆಳ್ವ ಅವರು ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದಿರುತ್ತಾರೆ. ಪರಿಣಾಮವಾಗಿ ಗಾಯಗೊಂಡಿದ್ದ ಅವರು ಮುರತ್ತಂಗಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೂಡಬಿದ್ರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಬಸ್‌ ಚಾಲಕ
ಮತ್ತು ಕಂಡಕ್ಟರ್‌ನ ನಿರ್ಲಕ್ಷತನವೇ ಕಾರಣ ಎಂದು ನಿರಂಜನ ಆಳ್ವ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







error: Content is protected !!
Scroll to Top