ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಹೊರತುಪಡಿಸಿ ಎಲ್ಲಾ ಸಚಿವರ ರಾಜೀನಾಮೆ

ಅಹ್ಮದಾಬಾದ್ : ಗುಜರಾತ್‌ನಲ್ಲಿ ನಡೆದ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಸರ್ಕಾರದ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಘಟನೆ ಅ. 16ರಂದು ನಡೆದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಸಂಪುಟ ಪುನಾರಚನೆಗೆ ಮುಂದಾಗಿದ್ದು, ಪ್ರಸ್ತುತ ಸಚಿವ ಸಂಪುಟದ 7-10 ಸಚಿವರನ್ನು ಮತ್ತೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಾಳೆ ಬೆಳಿಗ್ಗೆ 11:30ರ ವೇಳೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಎಲ್ಲಾ ಶಾಸಕರು ಮತ್ತು ನಿರ್ಗಮಿತ ಸಚಿವರು ಗಾಂಧಿನಗರದಲ್ಲೇ ಇರುವಂತೆ ಸೂಚಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಗುಜರಾತ್‌ಗೆ ಆಗಮಿಸಿದ್ದಾರೆ. ಹೊಸ ಸಚಿವ ಸಂಪುಟವು 27 ಸಚಿವರನ್ನು ಒಳಗೊಂಡಿರಬಹುದೆಂದು ನಿರೀಕ್ಷಿಸಲಾಗಿದೆ.















































































error: Content is protected !!
Scroll to Top