ಅಕ್ರಮ ಪಟಾಕಿ ದಾಸ್ತಾನು – ಮೂವರ ವಿರುದ್ಧ ಕೇಸ್‌ ದಾಖಲು

ಉಡುಪಿ : ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಣೆ ಮಾಡಿದ್ದ ಮೂವರ ವಿರುದ್ಧ ಕಾರ್ಕಳ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ, ಕೋಟ್ಯಾಂತರ ರೂ. ಮೌಲ್ಯದ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. ಮಿಯ್ಯಾರು ನಿವಾಸಿಗಳಾದ ಸತ್ಯೇಂದ್ರ ನಾಯಕ್ (70), ಶ್ರೀಕಾಂತ್ ನಾಯಕ್ (37) ಹಾಗೂ ರಮಾನಂದ ನಾಯಕ್ (48) ಆರೋಪಿತರು. ಪರವಾನಗಿ ಇಲ್ಲದೆ ಮತ್ತು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸತ್ಯೇಂದ್ರ ನಾಯಕ್‌ ಅವರ ಹಳೆ ಮನೆಯಲ್ಲಿ 1 ಕೋಟಿ ರೂ. ಗೂ ಅಧಿಕ ಮೌಲ್ಯದ ವಿವಿಧ ಬ್ರ್ಯಾಂಡ್‌ನ ಪಟಾಕಿಗಳನ್ನು ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ದಾಸ್ತಾನಿರಿಸಲಾಗಿತ್ತು.
ಎಸ್‌ಪಿ ಹರಿರಾಂ ಶಂಕರ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸುಧಾಕರ್‌, ಕಾರ್ಕಳ ಉಪವಿಭಾಗದ ಎಎಸ್‌ಪಿ ಡಾ. ಹರ್ಷಪ್ರಿಯಾಂವದ ಮಾರ್ಗದರ್ಶನದಲ್ಲಿ ದಾಳಿ ನಡೆದಿತ್ತು. ಕಾರ್ಕಳ ವೃತ್ತ ನಿರೀಕ್ಷ ಮಂಜಪ್ಪ ಡಿ.ಆರ್.‌, ನಗರ ಠಾಣೆ ಎಸ್‌ಐಗಳಾದ ಮುರಳೀದರ್‌ ನಾಯಕ್‌ ಹಾಗೂ ಶಿವಕುಮಾರ್‌, ಬಾಂಬ್‌ ನಿಷ್ಕ್ರೀಯ ದಳ, ಸೋಕೋ ತಂಡ ಕಾರ್ಯಾಚರಣೆಯಲ್ಲಿತ್ತು. ಕಾರ್ಕಳ ತಹಶೀಲ್ದಾರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.















































































error: Content is protected !!
Scroll to Top