ಸರಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಿರ್ಬಂಧ

ಕಾರ್ಕಳ : ಸರಕಾರಿ, ಅನುದಾನಿತ ಶಾಲೆಗಳು ಹಾಗೂ ಇತರೆ ಸರಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವುದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಸರಕಾರಿ ಶಾಲೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೇ ನಿರಾಕರಿಸುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಆರೋಪಿಸಿದರು.
ಸರಕಾರಿ ಶಾಲಾ ಆವರಣದಲ್ಲಿ ಚಟುವಟಿಕೆ ನಡೆಸುವುದಕ್ಕೆ ಖಾಸಗಿ ಸಂಸ್ಥೆಗಳಿಗೆ ಪೂರ್ವಾನುಮತಿ ಕಡ್ಡಾಯ. ಖಾಸಗಿ ವ್ಯಕ್ತಿಗಳ ಪ್ರವೇಶ ನಿರ್ಬಂಧ ಮಾಡುವುದರ ಉದ್ದೇಶವೇನು ?
ಗ್ರಾಮೀಣ ಸರಕಾರಿ ಶಾಲೆಗಳು ಕೇವಲ ಕಲಿಕಾ ಕೇಂದ್ರವಲ್ಲ. ಅಲ್ಲಿ ವಾರಾಂತ್ಯದಲ್ಲಿ ಸಂಘ- ಸಂಸ್ಥೆಗಳ ಸಭೆ, ಸಾಂಸ್ಕ್ರತಿಕ ಚಟುವಟಿಕೆಗಳು ನಡೆಯುತ್ತದೆ. ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತದೆ. ಹಾಗಾದರೆ ಸರಕಾರ ಇದೆಲ್ಲವನ್ನೂ ಬ್ಯಾನ್ ಮಾಡುತ್ತದೆಯೇ ? ಸರಕಾರಿ ಶಾಲಾ ಆವರಣವನ್ನು ನಿರ್ಬಂಧಿಸುವುದೆಂದರೆ ಸಾರ್ವಜನಿಕರಿಂದ ಅದನ್ನು ದೂರ ಇಡುವುದು, ಕಾಲಕ್ರಮೇಣ ಸರಕಾರಿ ಶಾಲೆಗಳನ್ನು ಮುಚ್ಚುವುದು ಸರಕಾರದ ಹುನ್ನಾರವೆಂದಿನಿಸುತ್ತದೆ. ಇದು ಸರಕಾರದ ಬಾಲಿಶ ನಿರ್ಧಾರವಲ್ಲದೇ ಮತ್ತೇನು ಅಲ್ಲ ಎಂದು ಸುನಿಲ್‌ ಕುಮಾರ್‌ ಹೇಳಿದ್ದಾರೆ.























































































































error: Content is protected !!
Scroll to Top