ನಿಯಮಿತ ರಕ್ತದಾನದಿಂದ ಆರೋಗ್ಯ ವೃದ್ಧಿ – ಡಾ. ವೀಣಾ ಕುಮಾರಿ
ಕಾರ್ಕಳ : ಪ್ರಧಾನಿ ಮೋದಿ ಅವರ 75ನೇ ಜನ್ಮದಿನದಂಗವಾಗಿ ಕಾರ್ಕಳ ಬಿಜೆಪಿ ಯುವಮೋರ್ಚಾ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಸೆ. 17ರಂದು ವಿಕಾಸ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಮಾತನಾಡಿ ರಕ್ತದಾನ ಶ್ರೇಷ್ಠದಾನ, ಇದು ಕೇವಲ ಸೇವೆಯಲ್ಲ, ಒಂದು ಮಹಾ ಮಾನವೀಯ ಕಾರ್ಯ, ರಕ್ತದಾನ ಮಾಡಿದರೆ ದೇಹದಲ್ಲಿ ಹಳೆಯ ರಕ್ತಕಣಗಳು ಹೋಗಿ, ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರಿಂದ ದೇಹವೂ ಉಲ್ಲಾಸಭರಿತವಾಗುವುದು ಎಂದರು.
ಸೇವಾ ಪಾಕ್ಷಿಕದ ಸಂಚಾಲಕ ರವೀಂದ್ರ ಕುಮಾರ್ ಮಾತನಾಡಿ, ನರೇಂದ್ರ ಮೋದಿಯವರು ಈ ದೇಶದ ಮಹಾನ್ ಶಕ್ತಿ ಅವರ ಜನುಮದಿನದ ಶುಭ ಸಂದರ್ಭದಲ್ಲಿ ಯುವಮೋರ್ಚಾ ತಂಡವು ರಕ್ತದಾನ ಶಿಬಿರ ಆಯೋಜಿಸಿದ್ದು ಅತ್ಯಂತ ಶ್ಲಾಘನೀಯ ಎಂದರು.

ಶಿಬಿರದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯರಾಮ್ ಸಾಲ್ಯಾನ್, ತಾಲೂಕು ಉಪಾಧ್ಯಕ್ಷ ಬೋಳ ಸತೀಶ್ ಪೂಜಾರಿ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಬಿಜೆಪಿ ಮಂಡಲ ಕಾರ್ಯದರ್ಶಿ ಸುಮಿತ್ ಶೆಟ್ಟಿ ಕೌಡೂರು, ಜಿಲ್ಲಾ ಯುವಮೋರ್ಚಾ ಖಜಾಂಜಿ ಗುರುರಾಜ್ ಮಾಡ, ತಾಲೂಕು ಯುವಮೋರ್ಚ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು, ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಗಳಾದ ಧನುಷ್ ಆಚಾರ್ಯ ಅತ್ತೂರು, ರಜತ್ ರಾಮ್ ಮೋಹನ್ ಮುಡಾರು ಹಾಗೂ ಯುವಮೋರ್ಚ ಕಾರ್ಯಕರ್ತರು ಉಪಸ್ಥಿತರಿದ್ದರು.




























































