ಕಾರ್ಕಳ : ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಚಿತ್ತಾಕರ್ಷಕ ಶೋಭಾಯಾತ್ರೆ ನಡೆಯಲಿದೆ.
ಶ್ರೀ ಅನಂತಪದ್ಮನಾಭ ದೇವಸ್ಥಾನ, ಶ್ರೀ ಅನಂತಪದ್ಮನಾಭ ಪೆಟ್ರೋಲ್ ಬಂಕ್ ಹಾಗೂ ಶ್ರೀ ಗಜಾನನ ಗೇರುಬೀಜ ಕಾರ್ಖಾನೆ ಕುಚ್ಚೂರು ರಸ್ತೆಯಿಂದ ಶ್ರೋಭಾಯಾತ್ರೆ ಪ್ರಾರಂಭವಾಗಿ ಶಾಲಾ ಮೈದಾನ ತಲುಪಿದ ನಂತರ ಮಕ್ಕಳಿಂದ ನೃತ್ಯ, ಹುಲಿ ವೇಷ, ಯಕ್ಷಗಾನ, ಭಜನೆ, ಕೋಲಾಟ, ಮೊಸರು ಕುಡಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.


























