ಗಾಳಿ ಮಳೆ : ಕಾರ್ಕಳ – ಹೆಬ್ರಿ ತಾಲೂಕಿನ ವಿವಿಧೆಡೆ ಅಪಾರ ಹಾನಿ

ಕಾರ್ಕಳ : ಕಾರ್ಕಳ – ಹೆಬ್ರಿ ತಾಲೂಕಿನೆಲ್ಲೆಡೆ ಶನಿವಾರ ದಿನವಿಡೀ ಗಾಳಿ ಮಳೆಯಾಗಿದ್ದು, ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದಲ್ಲಿ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ, ಅಲ್ಲದೆ ವಿದ್ಯುತ್‌ ಕಂಬಗಳಿಗೆ ಮರ ಬಿದ್ದ ಕಾರಣ ವಿದ್ಯುತ್‌ ಸ್ಥಗಿತಗೊಂಡಿದೆ. ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.

ಮುಂಡ್ಲಿಯಲ್ಲಿ ಮನೆಗಳಿಗೆ ಹಾನಿ
ಕಾರ್ಕಳ ತಾಲೂಕಿನ ಮುಂಡ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಗಾಳಿ ಮಳೆಗೆ ಮರಗಳು ಬಿದ್ದು ಶಾರದಾ ಪೂಜಾರಿ, ಚೈತ್ರಾ ಆಚಾರ್ಯ, ರವಿ ಪೂಜಾರಿ, ಸುಲೋಚನಾ ಪೂಜಾರಿ, ಜಗದೀಶ್ ಪೂಜಾರಿ ಹಾಗೂ ರವಿ ಪೂಜಾರಿ ಅವರ ಮನೆಗಳಿಗೆ ಹಾನಿಯಾಗಿದೆ. ಮುಂಡ್ಲಿ ಕೆರ್ವಾಶೆ ಸಂರ್ಪಕ ರಸ್ತೆಯಲ್ಲಿ ಮರವೊಂದು ಬಿದ್ದು ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೆ ವಿದ್ಯುತ್‌ ತಂತಿಗೆ ಮರ ಬಿದ್ದ ಪರಿಣಾಮ ಗ್ರಾಮದಲ್ಲಿ ವಿದ್ಯುತ್‌ ಸ್ಥಗಿತಗೊಂಡಿದೆ.





























































































































error: Content is protected !!
Scroll to Top