ನಿಟ್ಟೆ ಡಾ.ಎನ್.ಎಸ್.‌ಎ.ಎಂ. ಪಿಯು ಕಾಲೇಜು ಪ್ರಾಂಶುಪಾಲರಾಗಿ ಡಾ. ಪ್ರಕಾಶ್‌ ಶೆಣೈ

ಕಾರ್ಕಳ : ನಿಟ್ಟೆ ಡಾ.ಎನ್.ಎಸ್.‌ಎ.ಎಂ. ಪಿಯು ಕಾಲೇಜು ಪ್ರಾಂಶುಪಾಲರಾಗಿ ಡಾ. ಪ್ರಕಾಶ್‌ ಶೆಣೈ ಅವರು ಅಧಿಕಾರ ಸ್ವೀಕರಿಸಿದರು.

ಮುದರಂಗಡಿ ಪಿಲಾರುಕಾನ ನಿವಾಸಿಯಾಗಿರುವ ಪ್ರಕಾಶ್‌ ಶೆಣೈ ಅವರು ತಮ್ಮ ಬಿಎಸ್ಸಿ ಪದವಿಯನ್ನು ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ, ಎಂ.ಎಸ್ಸಿ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಸುರತ್ಕಲ್‌ ಎನ್‌.ಐ.ಟಿ.ಕೆ.ಯಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿರುತ್ತಾರೆ. 36 ವರ್ಷಗಳ ವೃತ್ತಿ ಅನುಭವವಿರುವ ಅವರು ಹಲವು ವರ್ಷಗಳಿಂದ ನಿಟ್ಟೆ ಸಂಸ್ಥೆಯಲ್ಲಿ ಉಪಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಪಿಯು ಭೌತಶಾಸ್ತ್ರ ಪಠ್ಯ ಪುಸ್ತಕದ ಕನ್ನಡ ಅನುವಾದ ಸಮಿತಿಯ ಸದಸ್ಯರಾಗಿರುವ ಡಾ. ಪ್ರಕಾಶ್‌ ಶೆಣೈ ಸಿಇಟಿಯ ಪ್ರಶ್ನೆ ಪತ್ರಿಕೆಗಳ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.











































































error: Content is protected !!
Scroll to Top