ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ – ಜು. 15ರವರೆಗೆ ಅವಧಿ ವಿಸ್ತರಣೆ

ಕಾರ್ಕಳ : 2025-26ನೇ ಸಾಲಿಗೆ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ನೋಂದಣಿ ಪ್ರಕ್ರಿಯೆಯ ದಿನಾಂಕವನ್ನು ಜು. 15ರವರೆಗೆ ವಿಸ್ತರಿಸಲಾಗಿದೆ.

ವಿಮಾ ನೋಂದಣಿಗೆ ಮೊದಲು ಜೂ. 1ರಿಂದ ಜೂ. 30 ಕಾಲಾವಕಾಶ ನೀಡಲಾಗಿತ್ತು. ಈ ಸಮಯವನ್ನು ವಿಸ್ತರಣೆ ಮಾಡುವಂತೆ ಕೃಷಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ತೋಟಗಾರಿಕಾ ಇಲಾಖೆಗೆ ಬೆಳೆ ವಿಮಾ ನೋಂದಣಿಯ ಅವಧಿ ವಿಸ್ತರಿಸುವಂತೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಜು. 15ರವರೆಗೆ ವಿಮಾ ನೋಂದಣಿ ದಿನವನ್ನು ವಿಸ್ತರಿಸಲಾಗಿದೆ.

ಪ್ರತಿ ಹೆಕ್ಟೇರ್ ಅಡಿಕೆ ಬೆಳೆಗೆ ರೂ. 1,28,000 (ಪ್ರತಿ ಎಕರೆಗೆ ರೂ. 51,822/-) ವಿಮಾ ಮೊತ್ತವಾಗಿದ್ದು ರೈತರ ಪಾಲಿನ ವಿಮಾ ಕಂತು ರೂ. 6,400 (ಪ್ರತಿ ಎಕರೆಗೆ ರೂ. 2592/-) ಆಗಿರುತ್ತದೆ.

ಪ್ರತಿ ಹೆಕ್ಟೇರ್ ಕಾಳುಮೆಣಸು ಬೆಳೆಗೆ ರೂ. 47,000 (ಪ್ರತಿ ಎಕರೆಗೆ ರೂ.19,028/-) ವಿಮಾ ಮೊತ್ತವಾಗಿದ್ದು ರೈತರ ಪಾಲಿನ ವಿಮಾ ಕಂತು ರೂ. 2,350 (ಪ್ರತಿ ಎಕರೆಗೆ ರೂ. 952/-) ಆಗಿರುತ್ತದೆ.

ಬೆಳೆ ಸಾಲ ಪಡೆದ ರೈತರು ತಮ್ಮ ಬೆಳೆ ಸಾಲ ಪಡೆದ ಬ್ಯಾಂಕ್/ಸೊಸೈಟಿಯನ್ನು ಸಂಪರ್ಕಿಸಬಹುದಾಗಿದೆ. ಬೆಳೆ ಸಾಲ ಹೊಂದಿರದ ರೈತರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9481440812 (ಕಾರ್ಕಳ ತೋಟಗಾರಿಕಾ ಇಲಾಖೆ) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.































































































error: Content is protected !!
Scroll to Top