ನಮ್ಮ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

ದೆಹಲಿ : ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿಲ್ಲ ಎಂದು ವಾದಿಸುತ್ತಿದ್ದ ಪಾಕ್ ಇದೀಗ ನಿಜ ಒಪ್ಪಿಕೊಂಡಿದೆ. ಭಾರತ ನಮ್ಮ ಮೇಲೆ ದಾಳಿ ಮಾಡಿದೆ, ನಮ್ಮ ವಾಯುನೆಲೆಗಳನ್ನು ಉಡಾಯಿಸಿದೆ ಎಂದು ಸ್ವತಃ ಪಾಕ್​ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮೇ 10 ರ ಮುಂಜಾನೆ ಭಾರತೀಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಪಾಕಿಸ್ತಾನದೊಳಗಿನ ಇತರ ವಾಯು ನೆಲೆ ಹಾಗೂ ಸಾರ್ವಜನಿಕ ಪ್ರದೇಶದ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಅವರು ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಭಾರತ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅವರು ಬೆಳಗಿನ ಜಾವ 2:30 ಕ್ಕೆ ಕರೆ ಮಾಡಿ ಎಲ್ಲವನ್ನು ವಿವರಿಸಿದರು ಎಂದು ಹೇಳಿಕೊಂಡಿದ್ದಾರೆ.

ಭಾರತವು ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಜನರಲ್ ಅಸಿಮ್ ಮುನೀರ್ ಮಾಹಿತಿ ನೀಡಿದರು. ಆ ದಾಳಿ ನಡೆದ ಸುದ್ದಿ ಕೇಳಿ ನನಗೆ ನಿದ್ದೆ ಬಂದಿರಲಿಲ್ಲ, ತುಂಬಾ ನೋವಾಗಿದೆ ಎಂದು ಪಾಕ್‌ ಪ್ರಧಾನಿ ಹೇಳಿದ್ದಾರೆ. ಈ ಬಗ್ಗೆ ಎಕ್ಸ್​​​ ಮೂಲಕ ಟ್ವೀಟ್​​ ಮಾಡಿದ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಇದು ಆಪರೇಷನ್ ಸಿಂದೂರ್​​​​ ನಿಖರತೆ ಹಾಗೂ ಧೈರ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.































































































error: Content is protected !!
Scroll to Top