ಕಾರ್ಕಳ ಟಿಎಂಎ ಪೈ ಆಸ್ಪತ್ರೆ ಬಳಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನೆ

ಕಾರ್ಕಳ : ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅತ್ಯಗತ್ಯ. ಕೇಂದ್ರ ಸರಕಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಸ್ಥಾಪಿಸುವ ಮೂಲಕ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿ ದೊರೆಯುವಂತಾಗಿದೆ. ಜನತೆ ಇಂತಹ ಕೇಂದ್ರಗಳ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕೆಂದು ಜನಪ್ರಿಯ ರೈಸ್ ಮಿಲ್ ಮಾಲಕ ಕೆ. ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಮಾ. 9ರಂದು ಕಾರ್ಕಳ ‌‌‌ಟಿಎಂಎ ಪೈ ಆಸ್ಪತ್ರೆ ಬಳಿ ತೆರೆದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ಮಾಲಕ ಕಾಡುಹೊಳೆ ಸದಾನಂದ ನಾಯ್ಕ್ ಮಾತನಾಡಿ, ಜನೌಷಧಿ ಕೇಂದ್ರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ದರದಲ್ಲಿ ಲಭ್ಯವಿದೆ. ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಮಾನಸಿಕ ರೋಗ, ಇನ್ಸುಲಿನ್, ಆಂಟಿಬಯೋಟಿಕ್ಸ್, ಇಂಜೆಕ್ಷನ್, ವಿಟಮಿನ್, ಪ್ರೊಟೀನ್‌ ಹೀಗೆ 600ಕ್ಕೂ ಅಧಿಕ ಔಷಧಿಗಳು, 200ಕ್ಕೂ ಮಿಕ್ಕಿದ ಸರ್ಜಿಕಲ್ ಸಾಮಗ್ರಿಗಳು ನಮ್ಮಲ್ಲಿ ಲಭ್ಯವಿದೆ. ಕಡಿಮೆ ದರದಲ್ಲಿ ಸಣ್ಣ ಮಕ್ಕಳ ಮತ್ತು ವಯಸ್ಕರ ಡೈಪರ್‌, ಒಂದು ರೂಪಾಯಿಯಲ್ಲಿ ಸುವಿಧಾ ಸ್ಯಾನಿಟರಿ ನ್ಯಾಪ್ಕಿನ್ ದೊರೆಯಲಿದೆ. ಔಷಧಿಗಳ ಗುಣಮಟ್ಟವನ್ನು NABL ಸ್ಥಾಪಿತ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 8 ಗಂಟೆಯವರೆಗೆ ಕೇಂದ್ರ ತೆರೆದಿರಲಿದೆ ಎಂದರು.
ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ಹೆಬ್ರಿ ಜನೌಷಧಿ ಕೇಂದ್ರದ ಪಾಲುದಾರರಾದ ವಸಂತ್ ಕುಮಾರ್ ಮತ್ತು ಸಂತೋಷ್ ಕುಮಾರ್ ಶೆಟ್ಟಿ, ಫಾರ್ಮಸಿಸ್ಸ್ಟ್ ಆದರ್ಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.































































































error: Content is protected !!
Scroll to Top