ಕಾರ್ಕಳ : ನಂದಳಿಕೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಫೆ. 6ರಂದು ಸಂಭವಿಸಿದೆ. ಫೆ. 6ರಂದು ಸಂಜೆ 4.30ಕ್ಕೆ ಶಾಲಾ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದು, ಫೆ. 7ರಂದು ಬೆಳಗ್ಗೆ 9ಗಂಟೆಗೆ ಶಾಲೆಗೆ ಬಂದು ನೋಡಿದಾಗ ಮುಖ್ಯ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಕಚೇರಿಯ ಒಳಗಿದ್ದ ಕಪಾಟಿನ ಬಾಗಿಲನ್ನು ತೆರದಿದ್ದಾರೆ. ರಿಜಿಸ್ಟರ್ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಯಾವುದೇ ವಸ್ತುಗಳು ಕಳ್ಳತನವಾಗಿರುವುದಿಲ್ಲ. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಕರುಣಾಕರ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಂದಳಿಕೆ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ









































