ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ

ಸತಾಯಿಸುತ್ತಿದ್ದ ಮಾಲೀಕನಿಂದ ಪಾರಾಗಲು ತಪ್ಪಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು

4000 ಕಿ.ಮೀ. ಮೀನುಗಾರಿಕೆ ದೋಣಿಯಲ್ಲೆ ಪ್ರಯಾಣ

ಉಡುಪಿ : ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಮೀನುಗಾರಿಕೆ ದೋಣಿಯೊಂದು ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮಾನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮಾನ್ ಹಾರ್ಬರ್​ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್​​​ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.

ಓಮನ್ ಮೂಲದ ಬೋಟ್​ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಡ ಪತ್ತೆಯಾಗಿದ್ದು, ಇವರಿಗೆ ವೇತನ ಹಾಗೂ ಆಹಾರ ನೀಡದೆ ಬೋಟ್ ಮಾಲೀಕ ಸತಾಯಿಸುತ್ತಿದ್ದ ಎನ್ನಲಾಗಿದೆ. ಪ್ರಾಣಭಯದಿಂದ ಓಮನ್ ಹಾರ್ಬರ್​​ನಿಂದ ಮೀನುಗಾರರು ತಪ್ಪಿಸಿಕೊಂಡು ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿಲೋ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಬಂದಿದ್ದರು.

ವಿದೇಶಿ ಬೋಟ್ ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣಿಸಿದೆ. ಈ ಸಂದರ್ಭದಲ್ಲಿ ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಅದರಲ್ಲಿದ್ದವರು ಪರದಾಡಿದ್ದಾರೆ. ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರಿಗೆ ವಿದೇಶಿ ಬೋಟ್ ಪತ್ತೆಯಾಗಿರುವ ವಿಚಾರ ತಿಳಿದು ಕೋಸ್ಟ್ ಗಾರ್ಡ್​​ಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿಯ ಮೇರೆಗೆ ಬೋಟ್ ಹಾಗೂ ಮೀನುಗಾರರನ್ನು ವಶಕ್ಕೆ ಪಡೆದು​​ ಕೋಸ್ಟ್ ಗಾರ್ಡ್ ಪಾಸ್ ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.















































































error: Content is protected !!
Scroll to Top