ಪೆರ್ವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ ಬಂಗೇರ

ಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಪ್ರಭಾಕರ ಬಂಗೇರ ಅವರು ಫೆ. 20ರಂದು ಅಧಿಕಾರ ಸ್ವೀಕರಿಸಿದರು. ತಹಶೀಲ್ದಾರ್ ಪ್ರದೀಪ್‌ ಆರ್. ಅವರು ಪ್ರಭಾಕರ್ ಬಂಗೇರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್, ವ್ಯವಸ್ಥಾಪನ ಸಮಿತಿಯ ಸದಸ್ಯ, ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್, ರಮೇಶ್ ಬಿ., ಅರುಂಧತಿ ಬಿ. ಆಚಾರ್, ಶ್ಯಾಮಲಾ ಶೆಟ್ಟಿ, ಸುಕೇಶ್ ಸುವರ್ಣ, ನಿತ್ಯಾನಂದ ಕೆ., ರಾಜೇಶ್ ಕಲ್ಲೊಟ್ಟೆ, ಸುನಿಲ್ ಕುಮಾರ್ ಪೊಲ್ಲರ್ ಮೊದಲಾದವರು ಈ ಸಂದರ್ಭದಲ್ಲಿದ್ದರು.‌

































































































error: Content is protected !!
Scroll to Top