ಕಾರ್ಕಳ : ಕರ್ನಾಟಕ ಆಮ್ ರೆಸ್ಲಿಂಗ್ ಅಸೋಸಿಯೇಷನ್ ವತಿಯಿಂದ ಜ. 5ರಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಪಂಜ ಕುಸ್ತಿ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ ಸುಜಿತ್ ನಾಯಕ್, ಸೂರಜ್ ಆಚಾರ್ಯ, ಪ್ರಸಾದ್ ಪೂಜಾರಿ ಹಾಗೂ ಜೂನಿಯರ್ ವಿಭಾಗ ಹಾಗೂ ಯೂತ್ ವಿಭಾಗದಲ್ಲಿ ಆದಿತ್ಯ ಕೋಟ್ಯಾನ್, ಸಾತ್ವಿಕ್, ಸ್ವಸ್ತಿಕ್, ಪ್ರಜ್ವಿತ್ ಜಿ., ಭರತ್, ಕಿರಣ್, ಮೋಹಿತ್ ಶೆಟ್ಟಿ ವಿಜೇತರಾಗಿ ಉತ್ತರಾಖಂಡ್‌ನಲ್ಲಿ ನಡೆಯುವ ರಾಷ್ಟ್ರೀಯ ಪಂಜ ಕುಸ್ತಿ ಪಂದ್ಯಾಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. ಇವರು ಕಾರ್ಕಳ ಜೋಡುರಸ್ತೆಯ ಫ್ರೆಂಡ್ಸ್ ಪವರ್ ಜಿಮ್‌ನ ಮಹಮ್ಮದ್ ಅಲಿಯವರಿಂದ ತರಬೇತಿ ಪಡೆದಿರುತ್ತಾರೆ. ಫ್ರೆಂಡ್ಸ್ ಪವರ್ ಜಿಮ್‌ನ ಪಾಲುದಾರರಾದ ಯೋಗೀಶ್ ಸಾಲಿಯಾನ್ ವಿಜೇತರನ್ನು ಅಭಿನಂದಿಸಿದ್ದಾರೆ.
ಫ್ರೆಂಡ್ಸ್ ಪವರ್ ಜಿಮ್‌ನ 10 ಮಂದಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆ































