ಫೆ. 1-2 – ದಿ ಗ್ರೇಟ್ ಮರಾಠ ಟ್ರೋಫಿ ಕಾರ್ಕಳ ವತಿಯಿಂದ ಕ್ರೀಡಾಕೂಟ

ಕಾರ್ಕಳ : ಉಡುಪಿ, ಮಂಗಳೂರು, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕ್ಷತ್ರಿಯ ಮರಾಠ ಸಮಾಜದ ಪುರುಷರ, ಮಹಿಳೆಯರ ಮತ್ತು ಮಕ್ಕಳಿಗಾಗಿ ಫೆ. 1 ಹಾಗೂ 2ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಕ್ರಿಕೆಟ್ ಹಾಗೂ ತ್ರೊಬಾಲ್ ಪಂದ್ಯಾಟ ಆಯೋಜಿಸಲಾಗಿದೆ. ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಡಿ. 5ರಂದು ಮಿಯ್ಯಾರು ಡಿ. ಆರ್. ಸುವರ್ಣ ಅಡಿಟೋರಿಯಂ ನಲ್ಲಿ ಜರುಗಿತು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಅಧ್ಯಕ್ಷ ಕೀರ್ತನ್ ಕುಮಾರ್ ಲಾಡ್, ರಮಾನಾಥ್ ರಾವ್ ತಾಮಸ, ಸಂತೋಷ್ ರಾವ್ ಲಾಡ್, ಚಿರಾಗ್ ರಾವ್, ಹರಿಶ್ಚಂದ್ರ ರಾವ್ ಮೋರೆ, ಡಾ. ಪಲ್ಲವಿ ಕೀರ್ತನ್ ಕುಮಾರ್ ಲಾಡ್, ಡಾ. ಸುಮತಿ ರಾವ್ ಪವಾರ್, ರಾಜೇಶ್ವರಿ ರಾವ್ ತಮಾಸ, ದಿಶಾ ರಾವ್ ಕವಡೆ, ಸತೀಶ್ ರಾವ್ ಪವಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿಖಿಲ್ ರಾವ್ ಕಾರ್ಯಕ್ರಮ ನಿರೂಪಿಸಿ, ಶಕುಂತಲಾ ರಾವ್ ವಂದಿಸಿದರು.





























































































error: Content is protected !!
Scroll to Top