260ಕ್ಕೂ ಅಧಿಕ ಮದ್ಯದ ಬಾಕ್ಸ್ ಜಪ್ತಿ
ಕಾರ್ಕಳ : ಗುರುವಾರ ಮುಂಜಾನೆ ಕಾರ್ಕಳ ತಾಲೂಕಿನ ಬೋಳಕ್ಕೆ ಅಬಕಾರಿ ಅಧಿಕಾರಿಗಳು ದಿಢೀರ್ ಎಂದು ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್‌ಗಳು ಪತ್ತೆಯಾಗಿದ್ದು ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ.

ಇವೆಲ್ಲವೂ ಬ್ರ್ಯಾಂಡೆಡ್ ಮಾಲ್‌ಗಳಾದ ಜಾನಿ ವಾಕರ್, ಬ್ಲಾಕ್ ಲೇಬಲ್, ಬ್ಲ್ಯಾಕ್ ಆಂಡ್ ವೈಟ್, ಮ್ಯಾನ್ಶನ್ ಹೌಸ್ (MH), ಮ್ಯಾಕ್‌ಡ್ವೆಲ್ (MC), ಓಡ್ಕ ಲೇಬಲ್‌ನ ನಕಲಿ ಮದ್ಯವಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅಬಕಾರಿ ಇಲಾಖಾಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮತ್ತು ನಕಲಿ ಮದ್ಯ ತಯಾರಿಕೆ, ರವಾನೆ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ತಂಡ ತನಿಖೆ ನಡೆಸುತ್ತಿದೆ. ಅಧಿಕೃತ ಮತ್ತು ಸಮಗ್ರ ಇನ್ನಷ್ಟೆ ಇಲಾಖೆಯಿಂದ ತಿಳಿದು ಬರಬೇಕಾಗಿದೆ.

























