ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂ ಚಿಂತನೆ

ಕಾರ್ಕಳ : ಕಾರ್ಕಳ ಮೆಸ್ಕಾಂ ವಿಭಾಗ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ನ. 12ರಿಂದ 14ರವರೆಗೆ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಕಂಬ ಹತ್ತಿ ಇಳಿಯುವ ತರಬೇತಿ ಹಮ್ಮಿಕೊಂಡಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕವಿಪ್ರನಿ) ವತಿಯಿಂದ ರಾಜ್ಯದ ಎಲ್ಲ ಎಸ್ಕಾಂಗಳಿಗೆ ಕಿರಿಯ ಮಾರ್ಗದಾಳು ನೇಮಕಾತಿ ಸಂಬಂಧ ಸರಕಾರವು ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಕಂಬ ಹತ್ತಿ ಇಳಿಯುವ ತರಬೇತಿ ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ನ.12ರಿಂದ 3 ದಿನಗಳ ಕಾಲ ಬೆಳಗ್ಗೆ ಗಂಟೆ 9 ರಿಂದ ಸಂಜೆ 4 ಗಂಟೆಯರವರೆಗೆ ನಡೆಯಲಿದೆ. ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಎಸ್ಸೆಸೆಲ್ಸಿ ತೇರ್ಗಡೆ ಹೊಂದಿರಬೇಕು ಮತ್ತು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ (ಆಧಾರ್‌ ಪ್ರತಿ) ಹಾಜರಾಗಬೇಕು ಎಂದು ಕಾರ್ಕಳ ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









































































error: Content is protected !!
Scroll to Top