ಬೈಕ್‌ ಡಿಕ್ಕಿ – ಪಾದಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ ಡಿಕ್ಕಿಯಾಗಿ ಪಾದಚಾರಿಯೋರ್ವರು ಆಸ್ಪತ್ರೆ ದಾಖಲಾದ ಘಟನೆ ಅ. 13ರಂದು ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಸುನಿಲ್‌ ಎಂಬುವವರು ರಾತ್ರಿ 8.13ರ ವೇಳೆಗೆ ಅನಂತಶಯನದಿಂದ ದುರ್ಗಾ ಕಡೆಗೆ ಬೈಕ್‌ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಸಬಾ ಗ್ರಾಮದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ಬಳಿ ಸಾಗುವಾಗ ರಸ್ತೆಯ ಎಡಬದಿಗೆ ಬೈಕ್‌ ಚಲಾಯಿಸಿಕೊಂಡು ಬಂದು ದುರ್ಗ ಕಡೆಯಿಂದ ಅನಂತಶಯನದ ಕಡೆಗೆ ಬಲಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯಶೋದಾ ಎಂಬುವವರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಯಶೋದಾ ಅವರು ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬೈಕ್‌ ಸವಾರ ಸುನಿಲ್‌ ಕೂಡ ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



















































































error: Content is protected !!
Scroll to Top