ನಾರಾವಿ ಪ್ರೌಢ ಶಾಲೆ : ಕಂಪ್ಯೂಟರ್ ಲ್ಯಾಬ್ – ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಕಾರ್ಕಳ : ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಮೀರಾ ಕಾಮತ್ ಕಾರ್ಕಳ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಆ. 4ರಂದು ಉದ್ಘಾಟನೆಗೊಂಡಿತು. ಕೊಡುಗೆ ನೀಡಿರುವ ನಿವೃತ್ತ ಲೆಕ್ಕಪರಿಶೋಧಕ ಕೆ. ಕಮಲಾಕ್ಷ ಕಾಮತ್‌ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪೂರಕ ವ್ಯವಸ್ಥೆ ಶಾಲೆಗಳಲ್ಲಿರುವುದು ಅಗತ್ಯವೆಂದರು.

ಪ್ರತಿಭಾ ಪುರಸ್ಕಾರ
2023-24ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಹಾಗೂ ನಾರಾವಿ ಪ್ರೌಢಶಾಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಣಾತ್ಮಕ ಅಂಕದ ಸರಾಸರಿಯಲ್ಲಿ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಖ್ಯ ಶಿಕ್ಷಕಿ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಪ್ರತೀಕ್ ಕಾಮತ್ ಯುಎಸ್ಎ, ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ರಾವ್, ಗ್ರಾ.ಪಂ. ಸದಸ್ಯ ಉದಯ ಹೆಗ್ಡೆ ನಾರಾವಿ, ಜನಸೇವಾ ಟ್ರಸ್ಟ್ ನ ಕಾರ್ಯದರ್ಶಿ ಉಮೇಶ್,‌ ಎಸ್‌ಡಿಎಂಸಿ ಉಪಾಧ್ಯಕ್ಷ ಸುರೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಕೋದಂಡರಾಮ ಸ್ವಾಗತಿಸಿ, ಶಿಕ್ಷಕಿಯರಾದ ಆಶಾಲತಾ ಕಾರ್ಯಕ್ರಮ ನಿರೂಪಿಸಿ, ಶಾಂಭವಿ ಕುಮಾರಿ ವಂದಿಸಿದರು. ಶಿಕ್ಷಕರಾದ ಆಶಾಲತಾ, ಗೀತಾ, ಆನಂದ ಭಟ್, ಶರೀಫ್ ಕೆ. ಸಯ್ಯದ್ ಸಹಕರಿಸಿದರು.


ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಕೊಡುಗೆಯಾಗಿ ನೀಡಿರುವ ಕಮಲಾಕ್ಷ ಕಾಮತ್‌ ಅವರನ್ನು ಸನ್ಮಾನಿಸಲಾಯಿತು.



































































































error: Content is protected !!
Scroll to Top