ಶಿಕ್ಷಕರನ್ನು ಸನ್ಮಾನಿಸುವುದರಿಂದ ಸಮಾಜದಲ್ಲಿ ಧನಾತ್ಮಕ ಪರಿಣಾಮ : ಶ್ರೀನಿವಾಸ ಭಂಡಾರಿ

ಹೆಬ್ರಿ : ನಿವೃತ್ತ ಶಿಕ್ಷಕರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಗಳ ಮೂಲಕ ಹಿರಿಯ ಶಿಕ್ಷಕರನ್ನು ಸನ್ಮಾನಿಸುವುದು ಸಮಾಜದಲ್ಲಿ ಧನಾತ್ಮಕ ಪರಿಣಾಮ ಉಂಟು ಮಾಡುತ್ತಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಮತ್ತು ಕಲಿಸುವ ಕಾರ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಹೆಬ್ರಿ ತಾಲೂಕು ಘಟಕ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವನ್ನು ಪ್ರತಿ ವರುಷ ಹಮ್ಮಿಕೊಳ್ಳುತ್ತಿದ್ದು, ಅದರಂತೆ ಈ ವರ್ಷ ನಿವೃತ್ತ ಅಧ್ಯಾಪಕಿ ಪ್ರಭಾವತಿ ಎ. ಹೆಗ್ಡೆ ಅವರನ್ನು ಹೆಬ್ರಿ ಬಂಟರ ಭವನ ಬಳಿ ಇರುವ ಅವರ ಅನಂತ ಕೃಷ್ಣ ರೆಸಿಡೆನ್ಸಿ ಮನೆಯಲ್ಲಿ ಬುಧವಾರ ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ಹಿರಿಯ ಸದಸ್ಯ ಮ.ಮ. ಹೆಬ್ಬಾರ್ ಮಾತನಾಡಿ, ಪ್ರಭಾವತಿ ಹೆಗ್ಡೆಯವರು ಅಧ್ಯಾಪಕಿಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ತೋರಿದವರು. ಅವರ ಕಾರ್ಯಬದ್ಧತೆ ಮತ್ತು ಪರಿಣಾಮಕಾರಿ ಬೋಧನೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರಿಗೂ ಮಾದರಿಯಾಗಿತ್ತು. ಅಂತಹ ಶ್ರೇಷ್ಠ ಅಧ್ಯಾಪಕಿಯನ್ನು ಗೌರವಿಸುವ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ದಿನಕರ ಪ್ರಭು ಮಾತನಾಡಿ, ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಗುರುಮಾತೆ ಪ್ರಭಾವತಿಯವರು. ವಿದ್ಯಾರ್ಥಿಗಳನ್ನು ತಿದ್ದಿ ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡಿದವರು ಎಂದರು.

ಉಪನ್ಯಾಸಕಿ ಸುಲತಾ ಹೆಗ್ಡೆ, ಹಿರಿಯರಾದ ಬಾಲಚಂದ್ರ ಮುದ್ರಾಡಿ, ಎಚ್.ಜನಾರ್ದನ್, ಬಾಲಚಂದ್ರ ಹೆಬ್ಬಾರ್, ಸುನಿಲ್ ಭಂಡಾರಿ, ವೀಣಾ ಆರ್ ಭಟ್, ಪ್ರೀತೇಶ್‌ಕುಮಾರ್, ಪ್ರೇಮಾ ಬಿರಾದಾರ್ ಉಪಸ್ಥಿತರಿದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ ಕುಮಾರ್ ಸ್ಟಾಗತಿಸಿ, ಮಹೇಶ ಹೈಕಾಡಿ ಧನ್ಯವಾದವಿತ್ತರು. ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿದರು. ಪೂರ್ಣೇಶ ಕುಲಾಲ್ ಹೆಬ್ರಿ ಸನ್ಮಾನಪತ್ರ ವಾಚಿಸಿದರು.

































































































error: Content is protected !!
Scroll to Top