ಕಾರ್ಕಳ: ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿಭಾಗದ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸೋಮವಾರ ನೆರವೇರಿತು. ಎಸ್ಡಿಎಂಸಿ ಅಧ್ಯಕ್ಷ ಭಾಸ್ಕರ್ ಪೂಜಾರಿ ಉದ್ಘಾಟಿಸಿದರು.ಪದಗ್ರಹಣ ಕಾರ್ಯಕ್ರಮವನ್ನು ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್ ನೆರವೇರಿಸಿದರು.
ಮುಖೋಪಾಧ್ಯಾಯ ಗಿರಿಶ್ಚಂದ್ರ, ರೋಟರಿ ಕ್ಲಬ್ ಕಾರ್ಕಳ ರಾಕ್ಸಿಟಿಯ ಅಧ್ಯಕ್ಷ ಉಪೇಂದ್ರ ವಾಗ್ಲೆ, ಕಾರ್ಯದರ್ಶಿ ಪ್ರಶಾಂತ್ ಜೈನ್, ಟೀಚರ್ ಕೋ-ಆರ್ಡಿನೇಟರ್ ಸುಪ್ರಿತಾ, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಶ್ರೇಯಾ, ಕಾರ್ಯದರ್ಶಿ ಮಹೇಶ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕಾರ್ಕಳ ರಾಕ್ಸಿಟಿಯ ಸದಸ್ಯ ಶ್ರೀವರ್ಮ ಅಜ್ರಿ, ಪ್ರಮೋದ್ ಶೆಟ್ಟಿ ಮತ್ತು ಸೋಜನ್ ಪಿ ಜೇಮ್ಸ್ ಭಾಗವಹಿಸಿದ್ದರು. ಶಾಲೆಯ ಹಿರಿಯ ಶಿಕ್ಷಕ ಬಸವರಾಜ ತಾವರಗಿ ಸ್ವಾಗತಿಸಿ, ರೋಟರಿ ಸದಸ್ಯೆಯಾಗಿರುವ ಮಾಧವಿ ಕೆ ಕಾರ್ಯಕ್ರಮ ನಿರೂಪಿಸಿದರು.
ಬಜಗೋಳಿ: ಇಂಟರಾಕ್ಟ್ ಕ್ಲಬ್ ಪದಗ್ರಹಣ

























