ಕೆದಿಂಜೆ : ಕರೆಂಟ್ ಶಾಕ್‌ಗೆ ವ್ಯಕ್ತಿ ಸಾವು

ಕಾರ್ಕಳ : ಕೆದಿಂಜೆ ಗ್ರಾಮದ ಆಶ್ರಮವೊಂದರಲ್ಲಿ ಸೆಂಟ್ರಿಂಗ್‌ನ ರಾಡ್‌ ತುಂಡರಿಸುವ ವೇಳೆ ಹಾವೇರಿ ಮೂಲದ ವ್ಯಕ್ತಿಯೋರ್ವರು ಸಾವನಪ್ಪಿದ ಘಟನೆ ಏ. 19ರ ರಾತ್ರಿ ಸಂಭವಿಸಿದೆ. ಅನಂತೇಶ್ವರ (29) ಮೃತ ದುರ್ದೈವಿ. ಇವರು ರಾತ್ರಿ 9 ಗಂಟೆಯ ವೇಳೆಗೆ ಆಶ್ರಮದಲ್ಲಿ ರಾಡ್‌ ಕಟ್ಟಿಂಗ್‌ನಲ್ಲಿ ತಲ್ಲೀನರಾಗಿದ್ದಾಗ ಕರೆಂಟ್‌ ಶಾಕ್‌ ಹೊಡೆದಿದೆ. ತಕ್ಷಣವೇ ಸಾಮಾಜಿಕ ಮುಂದಾಳು ಸುಪ್ರೀತ್‌ ಶೆಟ್ಟಿ ಕೆದಿಂಜೆ ಮತ್ತು ಅನಂತೇಶ್ವರರ ಸಹೋದರರು ಅವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಪುಟ್ಟ ಮಗುವನ್ನು ಅಗಲಿದ್ದಾರೆ.









error: Content is protected !!
Scroll to Top