ಏ.1ರಿಂದ ನರೇಗಾ ದಿನಕೂಲಿಯಲ್ಲಿ 33 ರೂ. ಹೆಚ್ಚಳ

ಹೊಸದಿಲ್ಲಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಕೂಲಿ ಮೊತ್ತವನ್ನು 316 ರೂ.ನಿಂದ 349 ರೂ. ಏರಿಕೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಈ ಹೊಸ ಕೂಲಿ ಮೊತ್ತ ಏ.1ರಿಂದಲೇ ಜಾರಿಗೆ ಬರಲಿದೆ.
ಕೇಂದ್ರ ಸರಕಾರ ಹೆಚ್ಚುವರಿಯಾಗಿ ನಿತ್ಯ 33 ರೂ. ಕೂಲಿ ಹಣ ನೀಡಲಿದೆ. ಜೊತೆಗೆ ಸಲಕರಣೆಗಳ ಶುಲ್ಕ 10 ರೂ. ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಇದರಿಂದ ತುಂಬ ಅನುಕೂಲವಾಗಲಿದೆ. ನರೇಗಾದಿಂದಾಗಿ ಗ್ರಾಮೀಣ ಪ್ರದೇಶದ ಜನತೆ ತಾವು ಗುಳೆ ಹೋಗುವ ಬದಲಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ತಮ್ಮೂರಿನಲ್ಲಿಯೇ ಕೂಲಿ ಕೆಲಸ ಮಾಡಲು ಅಂದಿನ ಯುಪಿಎ ಸರಕಾರ ಜಾರಿಗೆ ತಂದ ಯೋಜನೆಗೆ ಕಾಲಕಾಲಕ್ಕೆ ಮತ್ತಷ್ಟು ಬಲ ತುಂಬುವ ಕೆಲಸವನ್ನು ಎನ್‌ಡಿಎ ಸರಕಾರ ಮಾಡುವ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಮಾಡುವ ಮೂಲಕ ಕೂಲಿ ಕಾರರ ಬೆನ್ನಿಗೆ ನಿಲ್ಲುತ್ತಿದೆ.
ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿ 34 ಕಡೆ ಮನರೇಗಾ ಕೂಲಿಕಾರರ ದಿನಗೂಲಿಯನ್ನು ಪರಿಷ್ಕರಿಸಲಾಗಿದೆ. ಇದರಿಂದ ಗ್ರಾಮೀಣ ಜನರ ಬದುಕಿಗೆ ಅನುಕೂಲವಾಗಲಿದೆ.



















































































error: Content is protected !!
Scroll to Top