ಹೆಬ್ರಿ : 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಿಂದ ಹೊರಡುವ 11 ಕೆವಿ ಶಿವಪುರ ಫೀಡರ್‌ನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಮತ್ತು ಮಾರ್ಗನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮಾ. 26ರಂದು ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಾಸ್ಥಾನದ ಬಳಿ, ಮುಳ್ಳುಗುಡ್ಡೆ, ಶಿವಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಮಾ. 26 : ಹೆಬ್ರಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ







































