ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ

ದೆಹಲಿ : ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ, ವೇಳಾಪಟ್ಟಿ ಮತ್ತು ಕ್ಷೇತ್ರವಾರು ವಿವರವನ್ನು ಭಾರತ ಚುನಾವಣಾ ಆಯೋಗ ಇಂದು (ಮಾ. 16) ಪ್ರಕಟಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ದೇಶಾದ್ಯಂತ ಜಾರಿಯಾಗಲಿದೆ.

ಏಳು ಹಂತಗಳಲ್ಲಿ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಏಪ್ರಿಲ್​ 19ರಂದು ನಡೆಯಲಿದೆ. ಕೊನೆಯ ಹಂತದ ಮತದಾನ ಜೂ. 1 ರಂದು ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.

ಹಂತ – ಮತದಾನ ದಿನಾಂಕ
1ನೇ ಹಂತ – 19 – 04- 2024 (102 ಕ್ಷೇತ್ರ)
2ನೇ ಹಂತ – 26-04- 2024 (89 ಕ್ಷೇತ್ರ)
3ನೇ ಹಂತ – 07-05-2024 (94 ಕ್ಷೇತ್ರ)
4ನೇ ಹಂತ – 13-05-2024 (96 ಕ್ಷೇತ್ರ)
5ನೇ ಹಂತ – 20-05-2024 (49 ಕ್ಷೇತ್ರ)
6ನೇ ಹಂತ – 25-05-2024 (56 ಕ್ಷೇತ್ರ)
7ನೇ ಹಂತ – 1-06-2024 (57 ಕ್ಷೇತ್ರ)

ಕರ್ನಾಟಕ ಲೋಕಸಭಾ ಚುನಾವಣೆ 2024ರ ವೇಳಾಪಟ್ಟಿ
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ (ಏ. 26) ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಮೂರನೇ ಹಂತದಲ್ಲಿ (ಮೇ 7) ಮತದಾನ ನಡೆಯಲಿದೆ.

ಏ. 26 ರಂದು ನಡೆಯುವ ಚುನಾವಣೆಯ ಲೋಕಸಭಾ ಕ್ಷೇತ್ರಗಳು
ಉಡುಪಿ – ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ)

ಚುನಾವಣೆ ಘೋಷಣೆ – ಮಾರ್ಚ್‌ 16, 2024
ಅಧಿಸೂಚನೆ ಪ್ರಕಟ- ಮಾರ್ಚ್‌ 28, 2024
ನಾಮಪತ್ರ ಸಲ್ಲಿಕೆಗೆ ಕೊನೆ ದಿನ – ಏಪ್ರಿಲ್‌ 04, 2024
ನಾಮಪತ್ರ ಪರಿಶೀಲನೆ – ಏಪ್ರಿಲ್‌ 05, 2024
ನಾಮಪತ್ರ ವಾಪಸ್‌ಗೆ ಕೊನೆ ದಿನ – ಏಪ್ರಿಲ್‌ 08, 2024
ಮತದಾನ – ಏಪ್ರಿಲ್‌ 26, 2024
ಫಲಿತಾಂಶ – ಜೂನ್‌ 04, 2024

ಮೇ. 7 ರಂದು ನಡೆಯುವ ಚುನಾವಣೆಯ ಲೋಕಸಭಾ ಕ್ಷೇತ್ರಗಳು
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್‌ಸಿ), ಗುಲ್ಬರ್ಗಾ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ

ಚುನಾವಣೆ ಘೋಷಣೆ – ಮಾರ್ಚ್‌ 16, 2024
ಅಧಿಸೂಚನೆ ಪ್ರಕಟ- ಏಪ್ರಿಲ್‌ 12, 2024
ನಾಮಪತ್ರ ಸಲ್ಲಿಕೆಗೆ ಕೊನೆ ದಿನ – ಏಪ್ರಿಲ್‌ 19, 2024
ನಾಮಪತ್ರ ಪರಿಶೀಲನೆ – ಏಪ್ರಿಲ್‌ 20, 2024
ನಾಮಪತ್ರ ವಾಪಸ್‌ಗೆ ಕೊನೆ ದಿನ – ಏಪ್ರಿಲ್‌ 22, 2024
ಮತದಾನ – ಮೇ 07, 2024
ಫಲಿತಾಂಶ – ಜೂನ್‌ 04, 2024

 































































































error: Content is protected !!
Scroll to Top