ಕಾಪು : ಕಾಪುವಿನ ಪೊಲಿಪು ಕಡಲಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಯುವಕ ಬಲೆಗೆ ಸಿಲುಕಿಕೊಂಡು ಸಾವನ್ನಪಿದ ಘಟನೆ ನಿನ್ನೆ ಸಂಭವಿಸಿದೆ. ಪೊಲಿಪು ನಿವಾಸಿ ಕಿಶೋರ್ (29) ಮೃತ ದುರ್ದೈವಿ. ಇವರು ನಿತ್ಯ ಕಯಾಕ್ ಬೋಟ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆ ಮಾಡುತ್ತಿದ್ದರು.
ನಿನ್ನೆ ಮುಂಜಾನೆಯೂ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಬೇರೆ ಮೀನುಗಾರಿಕಾ ಬೋಟಿನವರಿಗೆ ಮೃತದೇಹ ಸಿಕ್ಕಿದೆ. ನಂತರ ದಡಕ್ಕೆ ಕಯಾಕ್ ಹಾಗು ಮೃತದೇಹವನ್ನು ತಂದಿದ್ದಾರೆ.
ಒಂಟಿಯಾಗಿ ಮೀನುಗಾರಿಕೆ ಮಾಡುತ್ತಿದ್ದ ಯುವಕ ಬಲೆಗೆ ಸಿಲುಕಿ ಸಾವು









































