ಸಂಕ್ಷಿಪ್ತ , ಸರಳ ಬಜೆಟ್‌ ಮಂಡನೆ

ಆದಾಯ ತೆರಿಗೆ ಮಿತಿ ಯಥಾಸ್ಥಿತಿ

ಹೊಸದಿಲ್ಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಕ್ಷಿಪ್ತವಾಗಿ, ಸರಳವಾಗಿ ಬಜೆಟ್‌ ಮಂಡನೆ ಮಾಡುವ ಮೂಲಕ ಚುನಾವಣೆ ಕಾಲದ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಮಧ್ಯಂತರ ಬಜೆಟ್‌ ಆದ ಕಾರಣ ದೊಡ್ಡ ಘೋಷಣೆಗಳು, ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ. ಆದಾಯ ತೆರಿಗೆ ಮಿತಿಯನ್ನು 7 ಲಕ್ಷದ ಮಿತಿಯಲ್ಲೇ ಮುಂದುವರಿಸಿದ್ದಾರೆ.
ಸರಿಯಾಗಿ 11 ಗಂಟೆಗೆ ಶುರುವಾದ ಬಜೆಟ್‌ ಮಂಡನೆ 12 ಗಂಟೆಗೆ ಮುಗಿಯಿತು. ಒಂದು ತಾಸಿನ ಬಜೆಟ್‌ನಲ್ಲಿ ಸಚಿವೆ ಸರಕಾರದ ಸಾಧನೆಗೆ ಹೆಚ್ಚು ಒತ್ತುಕೊಟ್ಟರು. ಹೆಣ್ಣೂ ಮಕ್ಕಳ ಸರ್ವೈಕಲ್‌ ಕ್ಯಾನ್ಸರ್‌ ತಡೆಯಲು ಸಲಿಕೆ ಯೋಜನೆ ಬಜೆಟ್‌ನಲ್ಲಿ ಪ್ರಕವಾದ ಹೊಸ ಯೋಜನೆಗಳ ಪೈಕಿ ಪ್ರಮುಖವಾದದ್ದು.

-ವಿಮಾನ ನಿಲ್ದಾಣಗಳ ಸಂಖ್ಯೆ 149ಕ್ಕೇರಿಕೆ
-ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ಅನುದಾನ
-ಸಂಶೋಧನೆ, ತಂತ್ರಜ್ಞಾನಕ್ಕೆ ವಿಶೇಷ ಒತ್ತು
-ಉಡಾನ್‌ ಯೋಜನೆ- 571 ಹೊಸ ವಾಯುಮಾರ್ಗ
-ಜೈವಿಕ ಉತ್ಪನ್ನಗಳಿಗೆ ಪ್ರೋತ್ಸಾಹ
-40 ಸಾವಿರ ರೈಲು ಬೋಗಿಗಳ ಬದಲಾವಣೆ
-ಸಣ್ಣ ಪುಟ್ಟ ನಗರಗಳಿಗೆ ಮೆಟ್ರೋ ವಿಸ್ತರಣೆ
-ನಮೋ ಭಾರತ್‌ ರೈಲಿಗೆ ಹೆಚ್ಚಿನ ಒತ್ತು
-3 ಪ್ರಮುಖ ರೈಲ್ವೆ ಕಾರಿಡಾರ್‌ ನಿರ್ಮಾಣ
-ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು
-ವಿದ್ಯುತ್ ವಾಹನ ಉತ್ಪಾದನೆಗೆ ಇನ್ನಷ್ಟು ಆದ್ಯತೆ
-ಅಮೃತ ಕಾಲ ಕರ್ತವ್ಯ ಕಾಲ ಆರ್ಥಿಕತೆಗೆ ಬೂಸ್ಟ್‌
-ಎಫ್‌ಡಿಐ ಎಂದರೆ ಫಸ್ಟ್‌ ಡೆವಲಪ್‌ ಇಂಡಿಯಾ
-ಆತ್ಮನಿರ್ಭರ ಘೋಷಣೆಯಡಿ ಉದ್ಯೋಗ ಸೃಷ್ಟಿ
-ಜನಸಂಖ್ಯೆ ಏರಿಕೆ ನಿಯಂತ್ರಣಕ್ಕೆ ಸಮಿತಿ ರಚನೆ
-ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ
-ಪ್ರವಾಸೋದ್ಯಮಕ್ಕೆ 75 ಸಾವಿರ ಕೋಟಿ ಅನುದಾನ
-ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ನೀಲಿನಕ್ಷೆ































































































error: Content is protected !!
Scroll to Top