ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ 14 ರೂ. ಹೆಚ್ಚಳ

ಹೊಸದಿಲ್ಲಿ : ವಾಣಿಜಕ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ತುಸು ಹೆಚ್ಚಳವಾಗಿದೆ. ತೈಲ ಕಂಪನಿಗಳು ಫೆಬ್ರವರಿ 1ರ ಪರಿಷ್ಕರಣೆಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಯನ್ನು 14 ರೂ. ಹೆಚ್ಚಿಸಿವೆ. ಇದರಿಂದ ಸಿಲಿಂಡರ್‌ ಬೆಲೆ 1,755.50 ರೂಪಾಯಿನಿಂದ 1,769.50 ರೂಪಾಯಿಗೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರತಿ ತಿಂಗಳ ಮೊದಲನೆಯ ದಿನದಂದು ಅಡುಗೆ ಅನಿಲ ಮತ್ತು ಎಟಿಎಫ್‌ ಬೆಲೆಗಳನ್ನು ಹಿಂದಿನ ತಿಂಗಳ ಸರಾಸರಿ ಅಂತಾರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪರಿಷ್ಕರಿಸುತ್ತವೆ. ಈ ಬಾರಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವ ದಿನದಂದೇ ಬೆಲೆ ಏರಿಕೆ ಮಾಡಿರುವ ಬಗ್ಗೆ ಘೋಷಣೆ ಮಾಡಲಾಗಿದೆ. ಗೃಹ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ.































































































error: Content is protected !!
Scroll to Top