ಜೇಸಿಐ ಹೆಬ್ರಿ ನೂತನ ಅಧ್ಯಕ್ಷರಾಗಿ ರಕ್ಷಿತಾ ಪಿ. ಭಟ್

ಕಾರ್ಕಳ : ಹೆಬ್ರಿ ಜೇಸಿಐನ ನೂತನ ಅಧ್ಯಕ್ಷರಾಗಿ ರಕ್ಷಿತಾ ಪಿ. ಭಟ್ ಅವರು ಆಯ್ಕೆಯಾಗಿದ್ದಾರೆ.
ಹೆಬ್ರಿ ಜೇಸಿಐ ಘಟಕ 40 ವರುಷಗಳಿಂದ ಸಂಘಟನಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಇತ್ತಿಚೆಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಜೇಸಿಐ ಹೆಬ್ರಿಯ ಪೂರ್ವಾಧ್ಯಕ್ಷರಾದ ಯೋಗೀಶ್ ಭಟ್ ಮತ್ತು ಮಹಾಬಲೇಶ್ವರ ಅಡಿಗ ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು. ಈ ಸಂದರ್ಭ ಪ್ರಕಾಶ ಶೆಟ್ಟಿ, ಪುಟ್ಟಣ್ಣ ಭಟ್, ಮಂಜುನಾಥ ಕೆ. ಶಿವಪುರ, ರೂಪೇಶ ನಾಯ್ಕ, ಪ್ರವೀಣ್ ಶೆಟ್ಟಿ, ಸುಮಲತಾ ಅಡಿಗ ಹಾಗೂ ಜೇಸಿ ಮನ್ವಿತ್ ಅಡಿಗ ಉಪಸ್ಥಿತರಿದ್ದರು.































































error: Content is protected !!
Scroll to Top