ದೇಶದ ಗೃಹಿಣಿಯರಿಗೆ ಮೋದಿ ದಸರಾ ಕೊಡುಗೆ – ಹರ್ಷ ವ್ಯಕ್ತಪಡಿಸಿದ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ

ಕಾರ್ಕಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬದ ವಿಶೇಷ ಕೊಡುಗೆಯಾಗಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವ ಮಹಿಳೆಯರಿಗೆ ರೂ. 300 ರವರೆಗೆ ಹೆಚ್ಚಿನ ಸಬ್ಸಿಡಿ ಮಂಜೂರು ಮಾಡಿದ್ದಾರೆ. ಈ ಕೊಡುಗೆಗೆ ದೇಶದ ಸಮಸ್ತ ನಾರಿಯರ ಪರವಾಗಿ ನರೇಂದ್ರ ಮೋದಿಯವರಿಗೆ ಕಾರ್ಕಳ ಮಹಿಳಾ ಮೋರ್ಚಾ ಹರ್ಷ ವ್ಯಕ್ತಪಡಿಸಿದೆ.

ಉಜ್ವಲ ಯೋಜನೆಯ ಅನುಷ್ಠಾನದಿಂದ ದೇಶದ ಕೋಟ್ಯಂತರ ಅಡುಗೆ ಮನೆಗಳು ಹೊಗೆ ಮುಕ್ತಗೊಂಡು ಮಹಿಳೆಯರ ಆರೋಗ್ಯ ಸುಧಾರಣೆಗೆ ಕಾರಣರಾಗಿರುವ ಪ್ರಧಾನ ಮಂತ್ರಿಗಳು ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಮತ್ತೆ ಹೆಚ್ಚಿಸಿರುವುದು ನಮಗೆಲ್ಲ ಅತೀವ ಸಂತಸ ತಂದಿದೆ. ಇದಕ್ಕಾಗಿ ನಾವು ಪ್ರಧಾನ ಮಂತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಕಾರ್ಕಳ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

























































































































error: Content is protected !!
Scroll to Top