ಹಿರ್ಗಾನ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಅಪಾಯದಿಂದ ಪಾರು

ಕಾರ್ಕಳ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಆ. 4 ರಂದು ಮುಂಜಾನೆ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆಯಲ್ಲಿ ಸಂಭವಿಸಿದೆ. ಮರ್ಣೆ ಗ್ರಾಮದ ಕಾಡುಹೊಳೆ ಜನಪ್ರಿಯ ರೈಸ್ ಮಿಲ್‌ನ ಕೆ.‌ ಮಂಜುನಾಥ ಎಂಬವರಿಗೆ ಸೇರಿದ ರೆ‌ನಾಲ್ಟ್ ಡಸ್ಟರ್ ಕಾರು ಮುಂಜಾನೆ ಕಾಡುಹೊಳೆಯಿಂದ ಕಾರ್ಕಳಕ್ಕೆ ಸಾಗುತ್ತಿದ್ದಾಗ ನೆಲ್ಲಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ, ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ.













































































error: Content is protected !!
Scroll to Top