ಕಾರ್ಕಳ : ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂತಾನೋತ್ಪತ್ತಿ ಚಿಕಿತ್ಸಕ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರತಾಪ್ ಕುಮಾರ್ ಎನ್. ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಪ್ರತಿ ಮಂಗಳವಾರ ಅಪರಾಹ್ನ 2ರಿಂದ 4:40 ಗಂಟೆಯವರೆಗೆ ಅಪಾಯಿಂಟ್ಮೆಂಟ್ ಆಧಾರದ ಮೇಲೆ ಸಮಾಲೋಚನೆಗೆ ಲಭ್ಯರಿರುವರು.
ಈಗಿರುವ ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ, ಮಕ್ಕಳ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸೆ, ನೇತ್ರ ಚಿಕಿತ್ಸೆ, ಹ್ರದ್ರೋಗ , ಕಿವಿ-ಮೂಗು-ಗಂಟಲು, ನರವಿಜ್ಞಾನ (ನ್ಯೂರೊಲಜಿ), ಮೂತ್ರಪಿಂಡ (ನೆಫ್ರಾಲಜಿ), ಮೂತ್ರಶಾಸ್ತ್ರ (ಯುರೊಲೊಜಿ), ಉಪಶಾಮಕ ಔಷಧ, ಮಕ್ಕಳ ರಕ್ತಶಾಸ್ತ್ರ & ಕ್ಯಾನ್ಸರ್, ಶಸ್ತ್ರಚಿತ್ಸಾ ಕ್ಯಾನ್ಸರ್, ಚರ್ಮ, ಮಾನಸಿಕ ಆರೋಗ್ಯ, ರೇಡಿಯೋಲೋಜಿ ಮತ್ತು ಪ್ಯಾಥೋಲಾಜಿ (ಅತ್ಯಾಧುನಿಕ ತಂತ್ರಜ್ಞಾನದ ಲ್ಯಾಬ್ ಪರೀಕ್ಷಾ) ಸೇವೆಗಳಿಗೆ ಪೂರಕವಾಗಿದೆ. ಅಪಾಯಿಂಟ್ಮೆಂಟ್ ನಿಗದಿಪಡಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ 9731601150 ಅಥವಾ 08258 230583 ನಂಬರ್ ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಾ. ಪ್ರತಾಪ್ ಕುಮಾರ್ ಎನ್. ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗೆ ಲಭ್ಯ

























