ಸಾಹಿತ್ಯ ಮನಸ್ಸಿನ ಭಾವನೆಗಳ ಪ್ರತಿಬಿಂಬ – ಎಚ್‌. ಎಂ. ನಾಗರಾಜ ರಾವ್‌

ಕಾರ್ಕಳ : ಯಶಸ್ಸಿನ ಹಾದಿಯಲ್ಲಿ ಅನೇಕ ನಿರೀಕ್ಷೆಗಳಿರುತ್ತದೆ. ಆದರೆ, ನಿರೀಕ್ಷೆಗಳೇ ಪ್ರಧಾನವಾಗಬಾರದು. ನಿರಂತರ ಶ್ರಮ, ಕಠಿಣ ಪರಿಶ್ರಮದಿಂದ ಯಶಸ್ಸನ್ನು ಸಾಧಿಸಬಹುದಾಗಿದೆ. ಸಾಹಿತ್ಯವೂ ಯಶಸ್ಸಿನ ಪ್ರೇರಕ ಶಕ್ತಿಯಾಗಿದೆ. ನಮ್ಮ ಸಂವಹನದಲ್ಲೂ ಸಾಹಿತ್ಯವಿದೆ. ಭಾಷೆ ಎಂಬುದು ಜ್ಞಾನದ ವಾಹಿನಿ. ಅದು ಜ್ಞಾನವೇ ಆಗಿರಬೇಕಿಲ್ಲ ಬದಲಾಗಿ ಸಂವಹನದ ಮಾರ್ಗವಾಗಿದೆ. ಸಂವಹನ ಹೃದಯದಿಂದ ಹೊರಹೊಮ್ಮಿದಾಗ ಸರಳ ಸಾಹಿತ್ಯವಾಗುತ್ತದೆ ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಚ್‌. ಎಂ, ನಾಗರಾಜ ರಾವ್‌ ಕಲ್ಕಟ್ಟೆ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಜು. 17 ರಂದು ನಡೆದ ಸಾಹಿತ್ಯ-ಸಾಂಗತ್ಯ ಸರಣಿ ಕಾರ್ಯಕ್ರಮ -7 ರಲ್ಲಿ ಸಾಹಿತ್ಯ ಸಹವಾಸ ವ್ಯಕ್ತಿತ್ವ ವಿಕಸನ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು. ಸಾಹಿತ್ಯವೆಂದರೆ ಮನಸ್ಸಿನ ಭಾವನೆಗಳನ್ನು ಪ್ರತಿಬಿಂಬಿಸುವ ಮಾಧ್ಯಮ. ಸಾಹಿತ್ಯ ಓದುವಿಕೆಯಿಂದ ಸಂತೋಷ ದೊರೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಹಿತ್ಯದತ್ತ ಹೆಚ್ಚಿನ ಒಲವು ಹರಿಸಬೇಕೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌, ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್, ಗಣಪತಿ ಭಟ್‌ ಕೆ. ಎಸ್‌ ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಅಶ್ವತ್‌ ಎಸ್. ಎಲ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕರಾದ ಪ್ರಿಯಾಂಕ ಅತಿಥಿಗಳನ್ನು ಪರಿಚಯಿಸಿದರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

























































































































error: Content is protected !!
Scroll to Top