ಮಾಳ ಘಾಟಿಯಲ್ಲಿ ಕಾರು ಅಪಘಾತ : ತಿಂಗಳ ಬಳಿಕ ದೂರು ದಾಖಲು

ಕಾರ್ಕಳ : ಮಾಳ ಘಾಟಿಯಲ್ಲಿ ಕಳೆದ ಜೂ. 10ರಂದು ಸಂಭವಿಸಿದ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಸಮೀಪದ ಅಡ್ಡೂರಿನ ಕೋಟಿಪಳ್ಳ ಹೌಸ್‌ ಹನೀಫ್‌ ಎ.ಕೆ. (40) ಎಂಬವರು ದೂರು ದಾಖಲಿಸಿದ್ದಾರೆ.
ಕ್ರೆಟ್ಟಾ ಕಾರಿನಲ್ಲಿ ಹೋಗುತ್ತಿರುವಾಗ ಘಾಟಿಯಲ್ಲಿ ದನ ಅಡ್ಡ ಬಂದಿದ್ದು, ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಚಾಲಕ ಮುಬಾರಕ್‌ ಬ್ರೇಕ್‌ ಹಾಕಿದಾಗ ಕಾರು ನಿಯಂತ್ರಣ ತಪ್ಪಿ ಬಂಡೆಗೆ ದಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಹನೀಫ್‌, ತಶರೀಫಾ ಹಾಗೂ ಅವರ ಮಗು ಹಿಲಾಫ್ ಎಂಬವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು. ಚಾಲಕ ಮುಬಾರಕ್‌ಗೂ ಗಾಯವಾಗಿತ್ತು. ನೌಫಾಲ್‌ ಎಂಬವರು ಗಾಯಗಳಿಲ್ಲದೆ ಪಾರಾಗಿದ್ದರು. ಸಣ್ಣ ಪ್ರಮಾಣದ ಅಪಘಾತವಾಗಿರುವುದರಿಂದ ಕಾರ್ಕಳ ಠಾಣೆಗೆ ಹೋಗಿ ನೌಫಾಲ್‌ ದೂರು ದಾಖಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ ಚಾಲಕ ಮುಬಾರಕ್‌ಗೆ ತೀವ್ರ ಸ್ವರೂಪದ ಗಾಯವಾಗಿ ಹಲವು ದಿನ ಆಸ್ಪತ್ರಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ತಡವಾಗಿ ಅಪಘಾತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.































































error: Content is protected !!
Scroll to Top