ಬೆಳ್ಮಣ್‌ : ಮರ ಬಿದ್ದು ಬೈಕ್‌ ಸವಾರ ಸಾವು

ಪೇಟೆಯ ನಡುವೆ ಇದ್ದ ಮರ ರಾತ್ರಿ ಧರಾಶಾಹಿ

ಬೆಳ್ಮಣ್‌ : ಧಾರಾಕಾರ ಮಳೆ ಕಾರ್ಕಳದಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ನಿನ್ನೆ ರಾತ್ರಿ 9.30 ಹೊತ್ತಿಗೆ ಬೆಳ್ಮಣ್‌ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಬೃಹತ್‌ ಮರವೊಂದು ಧರೆಗುರುಳಿ ಬೈಕ್‌ ಸವಾರರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಇದರೊಂದಿಗೆ ನಿನ್ನೆ ಒಂದೇ ದಿನ ಕಾರ್ಕಳ ತಾಲೂಕಲ್ಲಿ ಮಳೆಗೆ ಇಬ್ಬರು ಬಲಿಯಾದಂತಾಗಿದೆ.


ಕಾರ್ಕಳ-ಪಡುಬಿದ್ರಿ ಹೆದ್ದಾರಿ ಪಕ್ಕದಲ್ಲೇ ಬೆಳ್ಮಣ್‌ ಪೇಟೆಯ ಮಧ್ಯೆ ಇದ್ದ ಮರ ಬಿದ್ದಾಗ ಚಲಿಸುತ್ತಿದ್ದ ಬೈಕ್‌ ಅದರಡಿ ಸಿಕ್ಕಿಬಿದ್ದಿದೆ. ರಸ್ತೆಗೆ ಬಿದ್ದ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಜಡಿಮಳೆಯ ನಡುವೆಯೇ ಸ್ಥಳೀಯರು ಅವರನ್ನು ಮರದ ನಡುವಿನಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದರು. ಮೃತ ವ್ಯಕ್ತಿಯನ್ನು ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಪ್ರವೀಣ್​ ತಮ್ಮ ಪಾಡಿಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ, ದೊಡ್ಡ ಆಲದ ಮರ ಅವರ ಮೇಲೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.













































































error: Content is protected !!
Scroll to Top