ಕಾರ್ಕಳ : ರೋಟರಿ ಕ್ಲಬ್ ವತಿಯಿಂದ ತೆಳ್ಳಾರು ದುರ್ಗಾ ಸರಕಾರಿ ಪ್ರೌಢಶಾಲೆಗೆ ಜೂ. 30 ರಂದು ಇನ್ಸಿನಿರೇಟರ್ ಹಸ್ತಾಂತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಲಬ್ನ ಅಧ್ಯಕ್ಷ ಮೋಹನ್ ಶೆಣೈ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾದಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ರೋಟರಿ ಕ್ಲಬ್ ಸದಾ ಸಹಕರಿಸುತ್ತದೆ ಎಂದ ಅವರು ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ರೊಟರಿ ಕ್ಲಬ್ ಸದಸ್ಯರಾದ ಪ್ರಕಾಶ್ ಮಡಿವಾಳ, ವಸಂತ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸ್ಮಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಅಜ್ರಾ ಬೇಗಂ ವಂದಿಸಿದರು.
ರೋಟರಿ ಕ್ಲಬ್ ವತಿಯಿಂದ ತೆಳ್ಳಾರು ಶಾಲೆಗೆ ಇನ್ಸಿನಿರೇಟರ್ ಕೊಡುಗೆ










































