ಪಟಾಕಿ ಕಿಡಿ ತಾಗಿ ಸಚಿವ ರಾಜಣ್ಣ ಕಣ್ಣಿಗೆ ಗಾಯ

ಅಭಿಮಾನಿಗಳು ಪಟಾಕಿ ಸಿಡಿಸಿದಾಗ ಸಂಭವಿಸಿದ ಘಟನೆ

ಹಾಸನ : ಪಟಾಕಿಯ ಕಿಡಿ ತಾಗಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಗಾಯವಾದ ಘಟನೆ ಕುಣಿಗಲ್‌ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್. ರಾಜಣ್ಣ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ಈ ವಿಷಯ ತಿಳಿದ ಅವರ ಅಭಿಮಾನಿಗಳು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಮಾಲೆ‌ಹಾಕಿ ಅಭಿನಂದಿಸಿ, ಬಳಿಕ ಸಮೀಪದಲ್ಲೇ ಪಟಾಕಿ ಸಿಡಿಸಿದರು. ಈ ಸಂದರ್ಭ ಸಚಿವ ರಾಜಣ್ಣ ಕನ್ನಡಕ ತೆಗೆದರು. ಆಗ ಪಟಾಕಿಯ ಕಿಡಿ ನೇರವಾಗಿ ಬಲ ಕಣ್ಣಿಗೆ ಬಂದು ಬಡಿಯಿತು. ತಕ್ಷಣ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು, ಬಳಿಕ ಹಾಸನಕ್ಕೆ ತೆರಳಿದರು.











































































error: Content is protected !!
Scroll to Top