ವಿಶ್ವ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಅಭಿನವ್-ಗೌತಮಿ ಜೋಡಿ

ಜರ್ಮನಿ : ಜರ್ಮನಿಯ ಜೂಲ್​ನಲ್ಲಿ ನಡೆಯುತ್ತಿರುವ ಐಎಸ್​ಎಸ್​ಎಫ್ ಜ್ಯೂನಿಯರ್ 10 ಮೀ. ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್‌ಗಳಾದ ಗೌತಮಿ ಭಾನೋಟ್‌ ಹಾಗೂ ಅಭಿನವ್ ಶಾ ಜೋಡಿಯು ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಭಾರತದ ಜೋಡಿ 17-7 ರಲ್ಲಿ ಫ್ರಾನ್ಸ್‌ನ ಓಷಾನ್‌ ಮುಲ್ಲರ್‌ ಮತ್ತು ರೊಮೇನ್ ಆಫ್ರೆರ್‌ ಅವರನ್ನು ಸೋಲಿಸಿ ಚಿನ್ನ ಗೆದ್ದಿತು. ಗೌತಮಿ ಮತ್ತು ಅಭಿವನ್‌ ಅವರು ಅರ್ಹತಾ ಹಂತದಲ್ಲಿ 628.3 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಂದು ಜೋಡಿ ಸ್ವಾತಿ ಚೌಧರಿ-ಸಲೀಂ 624.3 ಪಾಯಿಂಟ್ಸ್‌ಗಳೊಂದಿಗೆ ಏಳನೇ ಸ್ಥಾನ ಗಳಿಸಿತು. ಇನ್ನು 10ಮೀ. ಏರ್ ಪಿಸ್ತೂಲ್ ಮಿಕ್ಸೆಡ್​ನಲ್ಲಿ ಭಾರತದ ಸೈನ್ಯಮ್ ಹಾಗೂ ಅಭಿನವ್ ಚೌಧರಿ ಜೋಡಿಯು 12 ಅಂಕ ಕಲೆ ಹಾಕಿ ಬೆಳ್ಳಿ ಪದಕ ತಮ್ಮದಾಗಿಸಿದರು.













































































error: Content is protected !!
Scroll to Top