ಸ್ವಚ್ಛ ಕಾರ್ಕಳ ಬ್ರಿಗೇಡ್‌ ತಂಡದಿಂದ ಸ್ವಚ್ಛತಾ ಕಾರ್ಯ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್‌ ವತಿಯಿಂದ ಜೂ. 4ರಂದು ಕಾರ್ಕಳದ ಶ್ರೀ ವಿನಾಯಕಬೆಟ್ಟು ದೇವಸ್ಥಾನದ ದ್ವಾರದಿಂದ ಶ್ರೀ ಗುರು ರಾಘವೇಂದ್ರ ಮಠದವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಬೆಳಿಗ್ಗೆ 6.30 ಯಿಂದ 8.30 ವರೆಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರಾದ ರವೀಂದ್ರ ಮೊಯ್ಲಿ, ಶಿವಾನಂದ್ ಪೂಜಾರಿ, ರಾಜೇಂದ್ರ ಅಮೀನ್, ಧವಲ್ ನಾಯಕ್ ಮತ್ತು ದರ್ಶನ್ ಶೆಟ್ಟಿಗಾರ್ ಮುಂದಾಳತ್ವದಲ್ಲಿ ಸ್ವಚ್ಛ ಮಾರ್ಗಮ್ “ನಮ್ಮ ರಸ್ತೆ-ಸ್ವಚ್ಛ ರಸ್ತೆ” ಅಭಿಯಾನ ನಡೆಯಿತು. ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಲ್ಲಿದ್ದ ಕಸಗಳನ್ನು, 12 ಕ್ಕೂ ಅಧಿಕ ಗೋಣಿ ಚೀಲಗಳಲ್ಲಿ ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.

ಗುಡ್ಡೆಯಂಗಡಿ ಬಳಿಯಿರುವ ಅಶ್ವತ್ಥಕಟ್ಟೆ ನಾಗನ ಕಲ್ಲು ಪಕ್ಕ ನಾಗರಿಕರು ಇಟ್ಟಿರುವ ದೇವರ ಹಳೆಯ ಫೋಟೋ ಫ್ರೇಮ್ ಗಳನ್ನು ಅಲ್ಲಿಂದ ವಿಲೇವಾರಿ ಮಾಡಲಾಯಿತು. ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು ಪುರಸಭಾ ಸದಸ್ಯೆ ಭಾರತಿ ಅಮೀನ್, ಸ್ಥಳೀಯರಾದ ಆನಂದ ಮೂರ್ತಿ, ಸಂತೋಷ್ ದೇವಾಡಿಗ, ಶಾಂತರಾಮ ಪೈ, ಸ್ಥಳೀಯ ಮಕ್ಕಳು ಪಾಲ್ಗೊಂಡರು.











































































error: Content is protected !!
Scroll to Top