ಉಚಿತ ಪ್ರಯಾಣಕ್ಕೂ ಟಿಕೆಟ್​ ಪಡೆಯಲೇಬೇಕು : ಫ್ರೀ ಬಸ್ ಟಿಕೆಟ್ ಹೇಗರಲಿದೆ ಗೊತ್ತಾ?

ಬೆಂಗಳೂರು: ಕಾಂಗ್ರೆಸ್ ಪಕ್ಷ​ ಅಧಿಕಾರ ಬಂದ ಕೂಡಲೇ ಚುನಾವಣೆಗೂ ಮುನ್ನ ಘೋಷಿಸಿದ್ದ ಶಕ್ತಿ ಯೋಜನೆಯನ್ನು ಜಾರಿಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಈ ಯೋಜನೆಗೆ ಜೂ. 11ರಂದು ಚಾಲನೆ ಸಿಗಲಿದ್ದು, ಉಚಿತವಾಗಿ ಪ್ರಯಾಣಿಸುವ ಮಹಿಳೆ ಅಂಕಿ-ಅಂಶವನ್ನು ಲೆಕ್ಕಹಾಕಲು ಸರಕಾರ ಹೊಸ ಮಾದರಿಯ ಟಿಕೆಟ್ ಜಾರಿಗೆ ತರಲು ಮುಂದಾಗಿದೆ. ಸರಕಾರಿ ಬಸ್‌ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಬೇಕಾದರೂ ಸಹ ಟಿಕೆಟ್ ಪಡೆಯಬೇಕಿದೆ. ಹೀಗಾಗಿ ಕೆಎಸ್ಆರ್‌ಟಿಸಿ, ಬಿಎಂಟಿಸಿ ಹೊಸ ಮಾದರಿ ಟಿಕೆಟ್ ಬಿಡುಗಡೆ ಮಾಡಲಿವೆ. ಆದರೆ ಈ ಟಿಕೆಟ್ ಪಡೆಯಲು ಮಹಿಳೆಯರು ಹಣ ಕೊಡಬೇಕಿಲ್ಲ.

ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್​ನಲ್ಲಿ ಟಿಕೆಟ್ ಪಡೆಯುವ ಗೋಜಿಲ್ಲ ಎಂದು ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್​ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ. ಟಿಕೆಟ್​ ಮೇಲೆ ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಎಂದು ಬರೆದಿರುತ್ತಾರೆ ಮತ್ತು ಟಿಕೆಟ್​ನಲ್ಲಿ ಯಾವುದೇ ಬೆಲೆ ನಮೂದಾಗಿರುವುದಿಲ್ಲ. ಆದರೆ ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿ ಹಾಕಿ ನಿರ್ವಾಹಕರು ಟಿಕೆಟ್ ನೀಡಲಿದ್ದಾರೆ.

ನಾಲ್ಕು ನಿಗಮದ ಬಸ್ಸುಗಳಲ್ಲು ಮಹಿಳೆಯರಿಗೆ ಈ ರೀತಿಯ ಟಿಕೆಟ್ ನೀಡಲಾಗುತ್ತದೆ. ಹೀಗಾಗಿ ಮಹಿಳೆಯರು ಮಾಮೂಲಿಯಂತೆ ಕಂಡಕ್ಟರ್​ ಬಳಿ ಟಿಕೆಟ್​ ಪಡೆದುಕೊಳ್ಳಬೇಕು. ಸರಕಾರ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಹಣ ನೀಡಲು ಲೆಕ್ಕ ಬೇಕಾಗಿರುವ ಕಾರಣದಿಂದ ಈ ಮಾರ್ಗ ಅನುಸರಿಸಲಾಗಿದೆ.

ರಾಜ್ಯದ ಮಹಿಳೆಯರಿಗೆ ಮಾತ್ರ ಬಸ್ಸುಗಳಲ್ಲಿ ಉಚಿತ ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿರುತ್ತದೆ. ರಾಜಹಂಸ ಸೇರಿದಂತೆ ಎಸಿ ಬಸ್ಸುಗಳನ್ನು ಹೊರತು ಪಡಿಸಿ ಎಲ್ಲಾ ವೇಗದೂತ ಮತ್ತು ನಾರ್ಮಲ್ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದು.



































































































































































error: Content is protected !!
Scroll to Top