ಪ್ಲಾನೆಟ್ ಟ್ರೋಫಿ ಕ್ರಿಕೆಟ್‌ ಪಂದ್ಯಾಟ ಸಮಾರೋಪ

ಕಾರ್ಕಳ ಆರ್‌ಪಿಸಿಎ- ಪ್ರಥಮ, ಸಾಗರ ಯುವರಂಗ -ದ್ವಿತೀಯ

ಕಾರ್ಕಳ : ಬೆಂಗಳೂರು ಪ್ಲಾನೆಟ್ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳ ಕಾಲ ನಡೆದ ಕ್ರಿಕೆಟ್‌ ಪಂದ್ಯಾಟದ ಸಮಾರೋಪ ಸಮಾರಂಭ ಮೇ 25 ರಂದು ಜರುಗಿತು.

ಕಾರ್ಕಳ, ಶೃಂಗೇರಿ, ಸಾಗರ ಮತ್ತು ಉಡುಪಿ ಸೇರಿದಂತೆ ನಾಲ್ಕು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಕಾರ್ಕಳ ಆರ್‌ಪಿಸಿಎ (RPCA) ತಂಡ ಪ್ರಥಮ ಸ್ಥಾನ, ಸಾಗರದ ಯುವರಂಗ ತಂಡ ದ್ವಿತೀಯ ಮತ್ತು ಉಡುಪಿಯ ತಂಡ ತೃತೀಯ ಸ್ಥಾನ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಾ ಕೇಶವ, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್, ಬೆನಕ ಪುರಾಣಿಕ, ಶ್ರೀಷ ಭಟ್, ರಾಘವೇಂದ್ರ ಪ್ರಭು, ನಾಗೇಂದ್ರ ಕುಮುಟಾ, ಸುಶ್ಮಿತಾ ಪುರಾಣಿಕ ಭಾಗವಹಿಸಿದ್ದರು. ಪುರಸಭೆಯ ನಾಮ ನಿರ್ದೇಶಿತ ಮಾಜಿ ಸದಸ್ಯ ಸಂತೋಷ್ ರಾವ್ ಕಾರ್ಯನಿರ್ವಹಿಸಿದರು.



































































































error: Content is protected !!
Scroll to Top